ನಾವೆಲ್ಲರೂ ಸಿಎಂ ಜೊತೆ ಗಟ್ಟಿಯಾಗಿ ಇದ್ದೇವೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರು: ಸಿಎಂ ರಾಜೀನಾಮೆ ಕೇಳುವವರಿಗೆ ಮೊದಲು ವಿಪಕ್ಷದವರಿಗೆ ನೈತಿಕತೆ ಇದೆಯಾ ಕೇಳಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ರಾಜೀನಾಮೆ ಕೇಳುವವರಿಗೆ ಮೊದಲು ವಿಪಕ್ಷದವರಿಗೆ ನೈತಿಕತೆ ಇದೆಯಾ ಕೇಳಿ. ಅವರಿಗೆ ನೈತಿಕತೆ ಇದೆಯಾ ಅವರನ್ನ ಅವರು ಮೊದಲು ಪ್ರಶ್ನೆ ಮಾಡಿಕೊಳ್ಳಲಿ.
ವಿಪಕ್ಷದ ಎಷ್ಟು ಜನರ ಮೇಲೆ ಕೇಸ್ ಇಲ್ಲ. ಇದು ದ್ವೇಷದ ರಾಜಕೀಯ ಇದನ್ನ ನಾವು ರಾಜಕೀಯವಾಗಿಯೇ ಎದುರಿಸುತ್ತೇವೆ. ಹೈಕೋರ್ಟ್‌ನಲ್ಲಿ ಹಿನ್ನಡೆ ಆಗಿರಬಹುದು. ವಿಭಾಗೀಯ ಪೀಠ ಇದೆ. ಸುಪ್ರೀಂ ಕೋರ್ಟ್ ಇದೆ. ಕಾನೂನು ಹೋರಾಟ ಮಾಡುತ್ತೇವೆ. ನಾವೆಲ್ಲ ಸಿಎಂ ಜೊತೆ ಇದ್ದೇವೆ. ನೀವು ಹೆದರಬೇಡಿ. ನಿಮ್ಮ ನಾಯಕತ್ವ ರಾಜ್ಯ ಒಪ್ಪಿದೆ. ಮಂತ್ರಿ ಮಂಡಲ ಒಪ್ಪಿದೆ. ನಾವೆಲ್ಲರೂ ಸಿಎಂ ಜೊತೆ ಗಟ್ಟಿಯಾಗಿ ಇದ್ದೇವೆ ಎಂದು ಹೇಳಿದರು.