ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ಯಶ್ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತಿನ ಸಮರ ನಡೆಯುತ್ತಲೇ ಬಂದಿದೆ .
ಅದೇ ರೀತಿ ಈಗ ಯಶ್ ಕೂಡ ನಿಖಿಲ್ ಗೆ ಉತ್ತರ ನೀಡಿದ್ದಾರೆ ಮಂಡ್ಯದ ಯರಗನಹಳ್ಳಿಯಲ್ಲಿ ಪ್ರಚಾರದ ವೇಳೆ ಈ ಮಾತನ್ನು ಹೇಳಿದ್ದಾರೆ ,ನಮಗೆ ಯೋಗ್ಯತೆ ಇಲ್ಲ ಬಿಡಿ ಅದನ್ನು ನಾವು ಬೆಳೆಸಿಕೊಳ್ಳೋಣ ಆದರೆ ನಾವು ಅಪ್ಪನ ಹಾಗೂ ತಾತನ ಆಸ್ತಿಯಲ್ಲಿ ಬದುಕ್ತಾ ಇಲ್ಲ ,ನಾವೇ ದುಡೀಬೇಕು ನಾವೇ ತಿನ್ನಬೇಕು ಎಂದು ಯಶ್ ಹೇಳಿದ್ದಾರೆ,ಈ ಮಾತನ್ನು ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೆ ಹೇಳಿದ್ದಾರೆ ಎಂದು ಮಂಡ್ಯ ಜನರಲ್ಲಿ ಮಾತು ಕೇಳಿ ಬರ್ತಾ ಇದೆ