ತಮ್ಮ ಬಗ್ಗೆ ಕೇವಲವಾಗಿ ಮಾತನಾಡಿದ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ನಟ ರಾಕಿಂಗ್ ಸ್ಟಾರ್ ಯಶ್ ಖಡಕ್ ಉತ್ತರದ ಮೂಲಕ ಟಾಂಗ್ ನೀಡಿದ್ದಾರೆ.
ಬಾಡಿಗೆ ಕಟ್ಟದವರು ನನ್ನ ಬಗ್ಗೆ ಮಾತನಾಡುತ್ತಾರೆ. ನನ್ನ ತಾತ ಪ್ರಧಾನಿಯಾಗಿದ್ದಾಗ, ನಾವು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ 5 ಸಾವಿರ ರೂ ಬಾಡಿಗೆ ಮನೆಯಲ್ಲಿದ್ದೆವು ಎಂದು ಯಶ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದರು.
ನಿಖಿಲ್ ಅವರ ಮಾತಿಗೆ ಯಶ್ ಸಖತ್ ಆಗಿ ತಿರುಗೇಟು ನೀಡಿದ್ದಾರೆ. ನಮಗೇ ಬಾಡಿಗೆ ಕಟ್ಟಲು ಯೋಗ್ಯತೆ ಇಲ್ಲದೇ ಇರಬಹುದು. ಆದರೆ, ಜನರ ಸೇವೆ ಮಾಡಲು ಯೋಗ್ಯತೆ ಇದೆ. ಬಾಡಿಗೆ ಕಟ್ಟುವ ದುಡ್ಡಲ್ಲಿ ನೀರು ನೀಡಿದ್ದೇವೆ. ಬೇಕಾದರೆ ಕೊಪ್ಪಳ ಎಂಬ ಊರಿದೆ ಅಲ್ಲಿಗೆ ಪುರಸೊತ್ತು ಮಾಡಿಕೊಂಡು ಹೋಗಿ ಬರಲಿ. ಜನರೇ ಹೇಳುತ್ತಾರೆ. ನಾವು ಹೇಳಿಕೊಳ್ಳುವ ಯೋಗ್ಯತೆ ಇಲ್ಲ ಎಂದು ನಿಖಿಲ್ ಮಾತಿಗೆ ಉತ್ತರ ಕೊಟ್ಟಿದ್ದಾರೆ ರಾಕಿಂಗ್ ಸ್ಟಾರ್.
ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ದರ್ಶನ್ ಪ್ರಚಾರ ಮಾಡುತ್ತಿರುವುದು ಮೈತ್ರಿ ಪಡೆಯ ಕೆಂಗಣ್ಣಿಗೆ ಗುರಿಯಾದ್ದಂತಿದೆ. ಯಶ್ ಮತ್ತು ದರ್ಶನ್ ವಿರುದ್ಧ ಮಾತನಾಡುವ ಮಂದಿಗೆ ಅವರಿಬ್ಬರು ನಯವಾಗಿಯೇ ತಿರುಗೇಟು ನೀಡುತ್ತಾ ಬಂದಿದ್ದಾರೆ.
ನಿಖಿಲ್ಗೆ ರಾಕಿಂಗ್ ಸ್ಟಾರ್ ಖಡಕ್ ಟಾಂಗ್..!
Date: