No menu items!
19.6 C
Munich
Friday, May 1, 2026

ಪ್ರಚಾರದ ವೇಳೆ ‘ಕಬಡ್ಡಿ’ ಆಡಿದ ಮಧುಬಂಗಾರಪ್ಪ

Must read

ಲೋಕಸಭೆ ಚುನಾವಣೆ ಪ್ರಚಾರದ ಬಿಡುವಿನ ವೇಳೆ ಶಿವಮೊಗ್ಗ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಮಧುಬಂಗಾರಪ್ಪ ಕಬಡ್ಡಿ ಆಟವಾಡಿದ್ದಾರೆ.

ಶಿಕಾರಿಪುರ ತಾಲೂಕಿನ ಮುದ್ದನಹಳ್ಳಿ ಗ್ರಾಮದ ದೇವಸ್ಥಾನದ ಅವರಣದಲ್ಲಿ ಕಬಡ್ಡಿ ಅಂಕಣದಲ್ಲಿ‌ ಅವರು ಆಟವಾಡಿದ್ದು, ಜನರು ಹಾಗೂ ಮಕ್ಕಳೊಂದಿಗೆ ಬೆರೆತಿದ್ದಾರೆ. ಈ ಮೂಲಕ ತಂದೆ ಎಸ್. ಬಂಗಾರಪ್ಪ ಹಾದಿಯಲ್ಲಿ ಮಧುಬಂಗಾರಪ್ಪ ಸಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಕೂಡ ಸದಾ ಜನರೊಂದಿಗೆ ಬೆರೆಯುತ್ತಿದ್ದರು. ಜನನಾಯಕ ಜನರೊಂದಿಗೆ ಸೇರಿಕೊಂಡಿದ್ದಕ್ಕೆ ಗ್ರಾಮಸ್ಥರು ಪುಲ್ ಖುಷ್ ಆಗಿದ್ದಾರೆ. ಸಿಎಂ ಕುಮಾರಸ್ವಾಮಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮುದ್ದನಹಳ್ಳಿ ಗ್ರಾಮಸ್ಥರು ಜೈಕಾರ ಹಾಕಿದ್ದಾರೆ. ಮಧು ಅವರೊಂದಿಗೆ ಯುವಕರು ಸೆಲ್ಫಿ ತೆಗೆದುಕೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article