ಸ್ಯಾಂಡಲ್ವುಡ್ ನಟ, ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ, ಮಂಡ್ಯ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ. ರೆಬೆಲ್ ಸ್ಟಾರ್ ಅಂಬರೀಶ್, ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಸುಪುತ್ರ ಅಭಿಷೇಕ್ ಅಂಬರೀಶ್ ಆತ್ಮೀಯ ಗೆಳೆಯರು. ಆದರೆ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಮತ್ತು ಸುಮಲತಾ ಅವರು ಬದ್ಧ ವೈರಿಗಳಾಗಿರುವುದರಿಂದ ನಿಖಿಲ್ ಮತ್ತು ಅಭಿಷೇಕ್ ಇಬ್ಬರ ನಡುವೆ ಮನಸ್ತಾಪ ಇದೆ.
ನಿಖಿಲ್ ಮತ್ತು ಅಭಿಷೇಕ್ ಇಬ್ಬರಿಗೂ ಆತ್ಮೀಯರಾಗಿರುವವರಿಗೆ ಯಾರ ಪರ ಬ್ಯಾಟಿಂಗ್ ಮಾಡುವುದು ಎನ್ನುವುದೇ ದೊಡ್ಡ ತಲೆನೋವು. ಈ ಇಬ್ಬರಲ್ಲಿ ಯಾರು ಇಷ್ಟ ಎನ್ನುವ ಪ್ರಶ್ನೆ ಟಾಕ್ ಶೋ ಒಂದರಲ್ಲಿ ಡಿಂಪಲ್ ಕ್ವೀನ್ ರಚಿತಾರಾಮ್ ಅವರಿಗೂ ಎದುರಾಯಿತು, ನಿಖಿಲ್ ಮತ್ತು ಅಭಿಷೇಕ್ ಇಬ್ಬರಲ್ಲಿ ಯಾರು ಇಷ್ಟ ಎಂಬ ಪ್ರಶ್ನೆ ಅವರಿಗೆ ಎದುರಾದಾಗ…ರಚಿತಾ ನನಗೆ ಇಬ್ಬರೂ ಇಷ್ಟ.. ಇಬ್ಬರ ಹೆಸರನ್ನೂ ತೆಗೆದುಕೊಳ್ಳುತ್ತೇನೆ ಎಂದು ಬಿಟ್ಟಿದ್ದಾರೆ,

ರಚಿತಾ ನಿಖಿಲ್ ಜೊತೆಗೆ ಸೀತಾರಾಮ ಕಲ್ಯಾಣ ಸಿನಿಮಾದಲ್ಲಿ ನಟಿಸಿದ್ದರು, ಅಭಿಯ ಚೊಚ್ಚಲ ಚಿತ್ರ ಅಮರ್ ನಲ್ಲಿಯೂ ರಚಿತಾ ನಟಿಸಿದ್ದಾರೆ. ಸುದೀಪ್ ಮತ್ತು ದರ್ಶನ್ ಇಬ್ಬರಲ್ಲಿ ಯಾರು ಇಷ್ಟ ಎಂಬ ಪ್ರಶ್ನೆಯೊಮ್ಮೆ ಎದುರಾದಾಗ ರಚಿತಾ ಇಂಡಸ್ಟ್ರಿಗೆ ಪರಿಚಯಿಸಿದವರು ಒಬ್ಬರು. ಇಂಡಸ್ಟ್ರಿಯಲ್ಲಿ ಹೇಗಿರಬೇಕು ಎಂದು ಹೇಳಿಕೊಟ್ಟವರು ಒಬ್ಬರು ಎಂದು ಇಬ್ಬರೂ ಇಷ್ಟ ಎಂದಿದ್ದರು. ಇದಲ್ಲದೆ ರಕ್ಷಿತಾ, ರಮ್ಯಾ ಇಬ್ಬರಲ್ಲಿ ಇಬ್ಬರೂ ಇಷ್ಟ ಎಂದೂ ಕೂಡ ಹೇಳಿದ್ದರು ರಚಿತಾ ರಾಮ್.






