ಇತ್ತೀಚೆಗೆ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ನಡೆದ ಜೆಡಿಎಸ್ ಶಾಸಕರ ಸಭೆಯಲ್ಲಿ ಕೆಲ ಶಾಸಕರು ಜೆಡಿಎಸ್ ಯುವ ಘಟಕದ ಸ್ಥಾನಕ್ಕಾಗಿ ನಿಖಿಲ್ ಕುಮಾರ್ ಪರ ವಾದ ಮಾಡಿದರೆ, ಮತ್ತೆ ಕೆಲವರು ಪ್ರಜ್ವಲ್ ಪರ ವಾದ ಮಾಡಿದ್ದಾರೆ ಎನ್ನಲಾಗಿದ್ದು, ಅಂತಿಮ ನಿರ್ಧಾರವನ್ನು ವರಿಷ್ಠರೇ ಕೈಗೊಳ್ಳಬೇಕು ಎಂದು ನಿಖಿಲ್ ಹೇಳಿದ್ದಾರೆ.

ಜೆಡಿಎಸ್ ಕಾರ್ಯಕರ್ತರನ್ನು ಅವಲಂಬಿಸಿದ್ದು, ರಾಜಕೀಯವಾಗಿ ಸರಿಯಾಗಿ ತಂತ್ರ ಹೆಣೆಯುತ್ತಿಲ್ಲ. ಹಾಗಾಗಿ ಪಕ್ಷ ಬಲವರ್ಧನೆಗಾಗಿ ಹೊಸ ತಂತ್ರಗಾರರನ್ನು ಕರೆದುಕೊಂಡು ಬರಲಾಗುತ್ತದೆ.ವಿಜಯಪುರ, ಕಲಬುರಗಿ, ರಾಯಚೂರು, ಚಿತ್ರದುರ್ಗದಲ್ಲಿ ಜೆಡಿಎಸ್ ಪಕ್ಷ ಬೆಳೆಯುವ ಅವಕಾಶವಿದೆ ಎನ್ನಲಾಗಿದೆ.






