ನಿಖಿಲ್ ಕುಮಾರಸ್ವಾಮಿ ಕೂಡ ಫಿಲಂ ಇಂಡಸ್ಟ್ರಿಯಲ್ಲಿ ಇದ್ದಾರೆ. ಅದೇ ಇಂಡಸ್ಟ್ರಿಯಲ್ಲಿ ಈಗಾಗಲೇ ಬೆಳೆದಿರೊ ಒಬ್ಬ ನಟನ ಬಗ್ಗೆ ಮಾತಾಡೋದು ಸರಿಯಲ್ಲ. ಹಿರಿಯ ನಟರಿಗೆ ಸ್ವಲ್ಪವೂ ಗೌರವ ನೀಡದೆ ಮಾತನಾಡಿರುವುದು ಅವರ ದುರಹಂಕಾರವನ್ನ ಸೂಚಿಸುತ್ತದೆ ಎಂದು ನಟ ಯಶ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ಆಡಿದ ಮಾತಿಗೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತಿರೇಕದ ವರ್ತನೆ ಸರಿಯಲ್ಲ, ನಿಖಿಲ್ ಗೆ ಇನ್ನೂ ವಯಸ್ಸಿದೆ ವೈಯಕ್ತಿಕ ಟೀಕೆ ಬೇಕಾಗಿರಲಿಲ್ಲ ಇದೇ ತರಹ ನಾವು ಅವರ ಬಗ್ಗೆ ಮಾತನಾಡೋಕೆ ಹೊರಟರೆ ಏನಾಗಬಹುದು ಎಂದು ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ.