ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋತಿದ್ದಕ್ಕೆ ಬೇಸರಗೊಂಡ ಅಭಿಮಾನಿಯೊಬ್ಬ ತನ್ನ ಕೈಬೆರಳನ್ನೇ ಕತ್ತರಿಸಿಕೊಂಡು ನೋವು ತೋರಿಸಿಕೊಂಡ ಘಟನೆ ನಡೆದಿದೆ.
ಬೆರಳು ಕತ್ತರಿಸಿಕೊಂಡ ಅಭಿಮಾನಿಯನ್ನು ಮದ್ದೂರು ತಾಲ್ಲೂಕಿನ ಆಬಲವಾಡಿ ಗ್ರಾಮದ ಸುನೀಲ್ ಎಂದು ಗುರುತಿಸಲಾಗಿದೆ.
ಈತ ಜೆಡಿಎಸ್ ಪಕ್ಷದ ಅಭಿಮಾನಿಯಾಗಿದ್ದು ನಿಖಿಲ್ ಜಯಗಳಿಸಬೇಕೆಂಬ ದೃಷ್ಟಿಯಿಂದ ಮದ್ದೂರಿಗೆ ಬಂದು ಮತಚಲಾಯಿಸಿ ಹೋಗಿದ್ದ.
ಆದರೆ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ನಿಖಿಲ್ ಕುಮಾರಸ್ವಾಮಿ ವಿರುದ್ಧ 1ಲಕ್ಷ 30ಸಾವಿರ ಮತಗಳ ಅಂತರದಲ್ಲಿ ಗೆಲುವು ಪಡೆದುಕೊಂಡಿದ್ದರು.