ನಿತ್ಯ ಭವಿಷ್ಯ :  ವೃಶ್ಚಿಕ ರಾಶಿಯವರಿಗೆ ಲಾಭದ ದಿನ .. ಉಳಿದ ರಾಶಿಗಳ ಫಲಾಫಲಗಳೇನು?

Date:

ನಿತ್ಯ ಭವಿಷ್ಯ :  ವೃಶ್ಚಿಕ ರಾಶಿಯವರಿಗೆ ಲಾಭದ ದಿನ .. ಉಳಿದ ರಾಶಿಗಳ ಫಲಾಫಲಗಳೇನು?

 

ಮೇಷ :   ಈ ರಾಶಿಯವರಿಗೆ ಇಂದು ಅಶುಭ ಫಲಗಳು ಗೋಚರವಾಗುತ್ತಿವೆ. ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಜಾಸ್ತಿ. ಮುಟ್ಟಿದ ಯಾವ ಕೆಲಸಗಳು ಕೂಡ ಕೈಗೂಡುವುದಿಲ್ಲ. ಆರೋಗ್ಯದಲ್ಲೂ ಏರಿಳಿತವಿದೆ. ಇನ್ನುಳಿದಂತೆ ಸ್ಥಿರ ಬದುಕು! ಆರಕ್ಕೇರಲ್ಲ, ಮೂರಕ್ಕಿಳಿಯಲ್ಲ ಅನ್ನುವ ಸ್ಥಿತಿ.  ಅನನ್ಯಭಾವದಿಂದ ಸುಬ್ರಮಣ್ಯ ಸ್ವಾಮಿ ಮತ್ತು ಕುಜನ ಪ್ರಾರ್ಥನೆ ಮಾಡಿ.

ವೃಷಭ : ಮನರಂಜೆಗೆ ಹೆಚ್ಚು ಆದ್ಯತೆ ನೀಡುವಿರಿ. ಬುದ್ಧಿವಂತಿಕೆಯಿಂದ ಯಶಸ್ಸಿನತ್ತ ಹೆಜ್ಜೆಯಿಡುವಿರಿ. ನಿಮ್ಮ ಆತ್ಮೀಯರನ್ನು ಭೇಟಿ ನೀಡಿ ಅವರಿಗೆ ನೀವು ಬೆಂಬಲ ನೀಡುವಿರಿ. ಕಾನೂನು ವ್ಯವಹಾರದಲ್ಲಿ ಜಯ ಮೊದಲಾದ ಶುಭಫಲಗಳಿವೆ. ಆದರೆ, ಖರ್ಚು ಅಧಿಕ, ದಾಂಪತ್ಯದಲ್ಲಿ ಸಮಸ್ಯೆ ಮೊದಲಾದ ಅಶುಭ ಫಲಗಳು ಕೂಡ ಗೋಚರಿಸುತ್ತಿದ್ದು, ಅರ್ಧನಾರೀಶ್ವರನನ್ನು ಅನನ್ಯಭಾವದಿಂದ ಪ್ರಾರ್ಥನೆ ಮಾಡಿ.

ಮಿಥುನ :  ಈ ರಾಶಿಯಲ್ಲಿ ಜನಿಸಿರುವ ಕೃಷಿಕರಿಗೆ ಈ ದಿನ ಸಮೃದ್ಧಿ ಗೋಚರವಾಗುತ್ತಿದೆ. ಅಕ್ಕಿ – ಜಲ ಸಂಬಂಧ ವ್ಯಾಪಾರ, ವಹಿವಾಟು ನಡೆಸುತ್ತಿರುವವರಿಗೆ ಒಳಿತಾಗಲಿದೆ. ಈ ರಾಶಿಯಲ್ಲಿ ಜನಿಸಿದವರು ಕುಜನನ್ನು ಪ್ರಾರ್ಥಿಸಿದರೆ ಮತ್ತಷ್ಟು ಒಳಿತು ನಿರೀಕ್ಷಿಸಬಹುದು.

ಕರ್ಕಾಟಕ :  ನಿಮ್ಮ ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ಖಂಡಿತಾ ಯಶಸ್ಸು ಕಾಣುತ್ತೀರಿ. ಸಮರ್ಪಣಾಭಾವದಿಂದ ಕೆಲಸ ಮಾಡಿ ಶುಭವಿದೆ.  ಸ್ತ್ರೀಯರಿಗೆ ಉತ್ಸಾಹ ಹಾಗೂ ಬುದ್ಧಿಯಲ್ಲಿ ಮಂಕುಕವಿದಂತಿದ್ದು, ದಿನ ಆಲಸ್ಯಮಯವಾಗಿರುತ್ತದೆ. ಅಮ್ಮನವರನ್ನು ಪ್ರಾರ್ಥಿಸಿ, ಅಭಿಷೇಕಮಾಡಿಸಿದರೆ ಇನ್ನೂ ಒಳಿತು.

ಸಿಂಹ : ಮಾತು ಬಲ್ಲವನಿಗೆ ಜಗಳವಿಲ್ಲ.. ಅಂತೆಯೇ ಮಾತಿನಿಂದ ಕಾರ್ಯಸಿದ್ಧಿ ಆಗುವುದು ಕೂಡ ಉಂಟು. ಈ ರಾಶಿಯವರಿಗೆ ಇಂದು ಮಾತಿನಿಂದ ಕಾರ್ಯಸಿದ್ಧಿ , ಕುಟುಂಬದಲ್ಲಿ ಸ್ತ್ರಿಯರ ಸಹಕಾರ ಮೊದಲಾದ ಫಲಗಳು ಗೋಚರಿಸುತ್ತಿವೆ. ಈ ರಾಶಿಯಲ್ಲಿ ಹುಟ್ಟಿದವರು ಶ್ರೀ ಸುಬ್ರಮಣ್ಯ ಸ್ವಾಮಿ ಸ್ತೋತ್ರ ಪಠನೆ ಮಾಡಿ.

ಕನ್ಯಾ : ಲಾಭ ಗೋಚರವಾಗುತ್ತಿದೆ. ಆದಾಯದ ಜೊತೆಗೆ ಅದೇರೀತಿ ಖರ್ಚು ಕೂಡ ಇದೆ. ದಾಂಪತ್ಯದಲ್ಲಿ ಅಸಮಧಾನ , ನೆರೆಹೊರೆಯವರೊಂದಿಗೆ ಜಗಳ ಮೊದಲಾದ ಅಶುಭಫಲಗಳಿದ್ದು, ಲಕ್ಷ್ಮಿನಾರಾಯಣ ಹೃದಯ ಪಾರಾಯಣ ಮಾಡಿದರೆ ಒಳ್ಳೆಯದು.

ತುಲಾ : ಈ ರಾಶಿಯಲ್ಲಿ ಜನಿಸಿದವರು ಅಧಿಕ ಖರ್ಚು ಮಾಡಬೇಕಾಗಿದೆ. ಹಣಕಾಸಿನಲ್ಲಿ ವ್ಯತ್ಯಯ ಕಂಡುಬರಲಿದೆ. ಹಾಗಾಗಿ ಎಚ್ಚರ ಅತ್ಯಗತ್ಯ. ಕೆಲಸದಲ್ಲಿ ಅಧಿಕಶ್ರಮ ಹಾಕುತ್ತೀರಿ. ಆದರೆ, ನಷ್ಟ ಸಂಭವವೇ ಹೆಚ್ಚಿದೆ. ನವಗ್ರಹ ಪೀಡಾಪರಿಹಾರ ಸ್ತೋತ್ರ ಪಠಿಸಿದರೆ ಒಳ್ಳೆಯದು.

ವೃಶ್ಚಿಕ : ಇದು ಲಾಭದ ದಿನ. ಕೆಲಸ ಕಾರ್ಯಗಳು ಆರಾಮಾಗಿ ನಡೆದುಕೊಂಡು ಹೋಗಲಿವೆ. ಹಳೆಯ ಸಮಸ್ಯೆಗಳು ಅಂತ್ಯವಾಗಲಿವೆ. ಸಂತೋಷದ ದಿನವಾಗಿದ್ದು, ಖುಷಿಯಾಗಿ ದಿನಕಳೆಯಿರಿ. ಸುಬ್ರಮಣ್ಯ ದೇವರನ್ನು ಪ್ರಾರ್ಥಿಸಿ.

ಧನು : ಈ ರಾಶಿಯಲ್ಲಿ ಜನಿಸಿದವರು ಇಂದು ತಾಳ್ಮೆಯಿಂದ ಇರಬೇಕಿದೆ. ಅನಗತ್ಯ ಓಡಾಟವಂತು ಬೇಡವೇ ಬೇಡ. ಶಾಂತಿ ಮಂತ್ರ ಪಠಿಸಿದರೆ ಉತ್ತಮ. ಜಾಗರಕರಾಗಿರಿ.

ಮಕರ :  ಇಂದು ನೀವು ಆಧ್ಯಾತ್ಮದಲ್ಲಿ ಸಂತೋಷ ಕಾಣುವ ದಿನ. ನೆಮ್ಮದಿ ಮತ್ತು ಶಾಂತಿ ವಾತಾವರಣ. ಹೊಸ ಅವಕಾಶಗಳು ಗೋಚರಿಸುತ್ತಿವೆ. ಹಣಕಾಸಿನ ಬಗ್ಗೆ ಎಚ್ಚರವಿರಲಿ. ಗುರು ಪ್ರಾರ್ಥಿಸಿ.

ಕುಂಭ : ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು. ಮಾತಿನಲ್ಲಿ ಹಿಡಿತವಿರಲಿ. ಕೆಲಸದಲ್ಲಿ ಪ್ರಮಾದವೆಸಗುವ ಸಾಧ್ಯತೆ ಹೆಚ್ಚಿದ್ದು, ಎಚ್ಚರಿಕೆಯಿಂದ ಕೆಲಸ ಮಾಡಿ. ಅಂತೆಯೇ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ. ಕುಜನನ್ನು ಪ್ರಾರ್ಥಿಸಿ.

ಮೀನ :  ಭಾರಿ ಅನುಕೂಲಕಾರಿ ದಿನವಾಗಿದೆ. ವ್ಯವಹಾರದಲ್ಲಿ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಿರಿ. ಷೇರುಗಳಲ್ಲಿ ಹೂಡಿಕೆ ಮಾಡಬಹುದು, ಲಾಭ ಸಿಗಲಿದೆ. ಗುರುವನ್ನು ಪ್ರಾರ್ಥನೆ ಮಾಡಿ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...