ನಿದ್ದೆರಾಮಯ್ಯ ಅಂತಾನೇ ನಿಮಗೆ ಹೆಸರಿದೆ !

Date:

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಅವಧಿ ಕೆಲಸ‌ ಮಾಡಿದ್ದಾರೆ. ನೀವು 5 ತಾಸು ಕೆಲಸ ಮಾಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ಗೆ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ. ಜನ ನಿಮ್ಮನ್ನು ಮುಂದೆ ನಿದ್ರೆಗೆ ಬ್ರ್ಯಾಂಡ್ ಮಾಡುತ್ತಾರೆ ನೋಡಿ ಎಂದು ಕೌಂಟರ್ ಕೊಟ್ಟಿದ್ದಾರೆ. ಕಾರ್ಯಕ್ರಮಗಳಲ್ಲಿ ಪ್ರಧಾನಿ ನಿದ್ದೆ ಮಾಡ್ತಿರುವ ಒಂದು ದಾಖಲೆ ಕೊಡಿ. ಸಿದ್ದರಾಮಯ್ಯ ಮಲಗಿರೋದಕ್ಕೆ ಸಾಕ್ಷಿ ಇದೆ. ಇತರರು ಬಂದು ಎದ್ದೇಳಣ್ಣೋ ಸಿದ್ರಾಮಣ್ಣ ಅಂತಾ ಎಚ್ಚರಿಸಿದ್ದಾರೆ. ಮೋದಿ ಹಾಗೇ ಮಲಗಿರೋದು ಒಂದು ಫೋಟೋ ತೋರಿಸಿ. ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಅವಧಿ ಕೆಲಸ‌ ಮಾಡಿದ್ದಾರೆ.
ನೀವು 5 ತಾಸು ಕೆಲಸ ಮಾಡಲ್ಲ, ನಿಮ್ಮಿಂದ ಅಭಿವೃದ್ಧಿ ಮಾಡಲಾಗಿಲ್ಲ. ಅಭಿವೃದ್ಧಿ ಮಾಡುವವ ರನ್ನು ಸಿದ್ದರಾಮಯ್ಯನವರು ಟೀಕೆ‌ ಮಾಡ್ತಾರೆ. ಮಲಗಿರುವ ಒಂದು ಫೋಟೋ ನಿಮ್ಮ ಮನೆಯಲ್ಲಿ ಹಾಕಿಕೊಳ್ಳಿ. ನಿದ್ದೆರಾಮಯ್ಯ ಅಂತಾನೇ ನಿಮಗೆ ಹೆಸರಿದೆ ಎಂದು ಅಶೋಕ್ ಕಿಡಿ ಕಾರಿದ್ದಾರೆ. ನಿದ್ದೆರಾಮಯ್ಯ ಅಂತಾ ನಿಮಗೆ ಹೆಸರಿದೆಯೋ ಅಥವಾ ಮೋದಿಗೋ? ನಿದ್ದೆ ಮಾಡುವುದಕ್ಕೆ ನೀವೇ ಬ್ರ್ಯಾಂಡ್ ಅಂಬಾಸಿಡರ್. ಜನ ನಿಮ್ಮನ್ನು ಮುಂದೆ ನಿದ್ರೆಗೆ ಬ್ರ್ಯಾಂಡ್ ಮಾಡುತ್ತಾರೆ ನೋಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ಗೆ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...