ಅವಳೆಂದರೆ ನಿಮಗೆ ತುಂಬಾ ಇಷ್ಟ. ಅವಳ ಜೊತೆಯೇ ಲೈಫ್ ಲಾಂಗ್ ಇರಬೇಕು ಅನ್ನೋದು ನಿಮ್ಮಾಸೆ. ಆದರೆ ಅವಳಿಗೆ ನಿಮ್ಮ ಮೇಲೆ ಪ್ರೀತಿ ಇದೆಯೇ ಇಲ್ಲವೇ ಎಂಬುದನ್ನು ನೀವು ಮೊದಲು ತಿಳಿದುಕೊಳ್ಬೇಕು.
ಅದನ್ನು ನೀವು ತಿಳಿಯುವುದು ಹೇಗೆ?
* ನೀವು ನಿಮಗೆ ಇಷ್ಟವಾದ ಹುಡುಗಿಯ ಫ್ರೆಂಡ್ಸ್ ಜೊತೆ ಸ್ನೇಹ ಬೆಳೆಸಿ. ಅವರ ಜೊತೆ ಓಡಾಡಲು ಶುರುಮಾಡಿ. ಆಗ ಅವಳ ಬಗ್ಗೆ ನಿಮಗೆ ತಿಳಿಯುತ್ತೆ. ಅವಳ ಸ್ನೇಹಿತರು ನಿಮ್ಮ ಹೆಸರನ್ನು ಹೇಳಿ ಅವಳಿಗೆ ರೇಗಿಸುತ್ತಿದ್ದರೆ, ಅದಕ್ಕೆ ಅವಳು ನಾಚುತ್ತಿದ್ದರೆ ಅವಳಿಗೂ ನಿಮ್ಮ ಮೇಲೆ ಪ್ರೀತಿ ಅರಳಿದೆ ಎಂದು ಅರ್ಥ.
* ನೀವು ಅವಳ ಮೇಲಿನ ಭಾವನೆಯನ್ನು ಅವಳೊಡನೆ ಹಂಚಿಕೊಂಡಾಗ ಅವಳು ಮೌನವಾಗಿದ್ದರೂ ಅವಳಿಗೆ ನಿಮ್ಮ ಮೇಲೆ ಅದೇ ಭಾವನೆ ಇದೆ.ಹೇಳಲು ಹಿಂಜರಿಯುತ್ತಿದ್ದಾಳೆ ಅಂತ ಅರ್ಥ.
* ಅವಳು ನಿಮ್ಮ ಬಗ್ಗೆ, ನಿಮ್ಮ ಫ್ರೆಂಡ್ಸ್ ಬಗ್ಗೆ ವಿಚಾರಿಸುತ್ತಿರುತ್ತಾಳೆ. ನಿಮ್ಮ ಫ್ಯಾಮಿಲೆ ಬಗ್ಗೆ, ಫ್ಯಾಮಿಲಿ ಮೆಂಬರ್ಸ್ ಬಗ್ಗೆ ಕೇಳ್ತಾ ಇರ್ತಾಳೆ ಅಂತಾದ್ರೆ ಅವಳಿಗೂ ನಿಮ್ಮ ಮೇಲೆ ಹೊಸ ಭಾವನೆ ಮೂಡಿದೆ ಅಂತ ಅರ್ಥ..
* ಅವಳು ನಿಮ್ಮೊಡನೆ ಸಂಕೋಚವಿಲ್ಲದೆ ಎಲ್ಲಾ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾಳೆ ಅಂತಾದ್ರೆ.ಅವಳ ಫ್ಯಾಮಿಲಿ ಬಗ್ಗೆ ನಿಮ್ಮತ್ರ ಹೇಳ್ತಾಳೆ ಅಂತಾದ್ರೆ ಅವಳಲ್ಲಿ ನಿಮ್ಮ ಬಗ್ಗೆ ಪ್ರೀತಿ ಹುಟ್ಟಿದೆ ಅಂತನೇ.
*ನಿಮ್ಮೊಡನೆ ಮುಕ್ತವಾಗಿ, ಭಯ, ಅಳುಕು, ಸಂಕೋಚವಿಲ್ಲದೆ ಬೆರೆತರೆ ಅವಳೊಳಗೆ ನಿಮ್ಮ ಬಗ್ಗೆ ವಿಶೇಷ ಸ್ಥಾನವಿದೆ ಎಂದೇ ಅರ್ಥ.