ಉತ್ತರ ಕರ್ನಾಟಕದಲ್ಲಿ ಸುರಿದ ಭಾರಿ ಮಳೆಗೆ ಅಪಾರವಾದ ಹಾನಿ ಉಂಟಾದ ಹಿನ್ನೆಲೆಯಲ್ಲಿ ನೆರೆ ಪರಿಹಾರ ಕುರಿತಾಗಿ ಸಭೆ ನಡೆಸಲು ಇಂದು ಯಡಿಯೂರಪ್ಪನವರು ಬೆಳಗಾವಿಗೆ ಭೇಟಿ ನೀಡಿದ್ದರು. ಬೆಳಗಾವಿಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಭೆಯನ್ನು ಕೈಗೊಂಡಿದ್ದ ಯಡಿಯೂರಪ್ಪನವರಿಗೆ ಜಿಲ್ಲೆಯ ಹಲವಾರು ಶಾಸಕರು ಜಿಲ್ಲಾ ಪಂಚಾಯತ್ ಅಧಿಕಾರಿಗಳ ವಿರುದ್ಧ ದೂರಿನ ಪಟ್ಟಿ ಸಲ್ಲಿಸಿದರು.
ಹೌದು ನೆರೆ ಪರಿಹಾರದ ಕುರಿತಾಗಿ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ಹಲವಾರು ದೂರುಗಳನ್ನು ಯಡಿಯೂರಪ್ಪನವರಿಗೆ ಶಾಸಕರು ನೀಡಿದರು ಇದರಿಂದ ಸಿಡಿಮಿಡಿಗೊಂಡ ಯಡಿಯೂರಪ್ಪನವರು ಅಧಿಕಾರಿಗಳಿಗೆ ” ನಿಮಗೆ ಕನ್ನಡ ಬರಲ್ವಾ ಸರಿಯಾಗಿ ಕೆಲಸ ಮಾಡಿ ಇನ್ನು 15 ದಿನಗಳ ನಂತರ ನಾನು ಮತ್ತೆ ಇಲ್ಲಿಗೆ ಬರುತ್ತೇನೆ ಅಷ್ಟರಲ್ಲಿ ಯಾವುದೇ ರೀತಿಯ ದೂರು ಬರದಂತೆ ನೋಡಿಕೊಳ್ಳಬೇಕು” ಎಂದು ವಾರ್ನ್ ಮಾಡಿದರು.