ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಬೆಳ್ಳುಳ್ಳಿಯನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದು ಸಹ ಮುಖ್ಯ.
ಬೆಳ್ಳುಳ್ಳಿಯು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ: ಬೆಳ್ಳುಳ್ಳಿಯಲ್ಲಿ ಕಾರ್ಬೋಹೈಡ್ರೇಟ್ಗಳು, ಕೊಬ್ಬುಗಳು, ಪ್ರೋಟೀನ್ಗಳು, ಜೀವಸತ್ವಗಳು ಮತ್ತು ಖನಿಜಗಳು, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ3, ವಿಟಮಿನ್ ಬಿ5, ವಿಟಮಿನ್ ಬಿ6, ವಿಟಮಿನ್ ಬಿ9, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಇದೆ. ಇದು ಮ್ಯಾಂಗನೀಸ್, ರಂಜಕ ಮತ್ತು ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಇದು ಪೊಟ್ಯಾಸಿಯಮ್, ಸೋಡಿಯಂ, ಸತು ಮತ್ತು ಸೆಲೆನಿಯಮ್ ಅನ್ನು ಸಹ ಒಳಗೊಂಡಿದೆ.
ಬೆಳ್ಳುಳ್ಳಿ ಸೇವನೆಯ ಪ್ರಯೋಜನ: ಉಪವಾಸದ ಸಮಯದಲ್ಲಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಗ್ಲುಕೋಸ್ ಮಟ್ಟ ಕಡಿಮೆಯಾಗುತ್ತದೆ. ಇದು ಮಧುಮೇಹ ನಿರ್ವಹಣೆಗೆ ಹಾಗೂ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಪಧಮನಿಯಲ್ಲಿ ಅಭಿವೃದ್ಧಿಯಾಗುವ ಪ್ಲೇಕ್ ತಡೆಯುವ ಜೊತೆಗೆ ಹೃದಯಾಘಾತದ ಅಪಾಯ ಕಡಿಮೆ ಮಾಡುತ್ತದೆ.
ಮೂರು ತಿಂಗಳ ಅಧ್ಯಯನದಲ್ಲಿ ತಿಳಿದುಬಂದ ಮತ್ತೊಂದು ವಿಚಾರ ಎಂದರೆ, ಬೆಳ್ಳುಳ್ಳಿ ಹೆಚ್ಬಿಎ1ಸಿ ಮಟ್ಟವನ್ನು ಸ್ವಲ್ಪ ಕಡಿಮೆ ಮಾಡುತ್ತದೆ. ಜೊತೆಗೆ ಕಡಿಮೆ ಸಾಂದ್ರತೆಯ ಲಿಪೊಪ್ರೋಟಿನ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಸಂಶ್ಲೇಷಣೆ ಮತ್ತು ಎಲ್ಡಿಎಲ್ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
ರಕ್ತ ಹೆಪ್ಪುಗಟ್ಟುವಿಕೆ ತಕ್ಷಣಕ್ಕೆ ಸರಿಪಡಿಸಲು ಸಹಾಯ ಮಾಡುವ ಜೊತೆಗೆ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತೆ. ಈ ಮೂಲಕ ಹೃದಯದ ಆರೋಗ್ಯ ಕಾಪಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಹೆಚ್ಡಿಎಲ್ ಸಾಂದ್ರತೆ ಹೆಚ್ಚುತ್ತದೆ.
ಬೆಳ್ಳುಳ್ಳಿ ಸೇವನೆ ಹೇಗೆ?ಬೆಳ್ಳುಳ್ಳಿಯನ್ನು ಹಾಗೆಯೇ ಕಚ್ಚಾ ತಿನ್ನಬಹುದು. ಮಸಾಲೆ ಬೆರಸಿ, ಇಲ್ಲ ಅಡುಗೆಯಲ್ಲೂ ಸೇರಿಸಬಹುದು. ಬೆಳ್ಳುಳ್ಳಿ ಸಮೃದ್ಧ ಆಹಾರ, ಬೆಳ್ಳುಳ್ಳಿ ಎಣ್ಣೆ, ಬೆಳ್ಳುಳ್ಳಿ ಸಾಸ್ ಮೂಲಕವೂ ಸೇವಿಸಬಹುದು. ಬೆಳ್ಳುಳ್ಳಿಯ ಕಟುವಾದ ರುಚಿ ಮತ್ತು ವಾಸನೆ ಹೊಂದಿದ್ದರೂ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.