ನಿಮಗೆ ಬೀಳುವ ಕನಸು ನಿಮ್ಮ ಭವಿಷ್ಯ ಹೇಳುತ್ತೆ!

Date:

ಒಂದಲ್ಲ ಒಂದು ಸಲ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕನಸು ಬಿದ್ದಿರುತ್ತೆ, ಬೀಳುತ್ತೆ, ಬೀಳುತ್ತಲೇ ಇರುತ್ತೆ! ಈ ಕನಸುಗಳು ನಿಮ್ಮ ಭವಿಷ್ಯ ಹೇಳ್ತಾವೆ ಅಂದ್ರೆ ನಂಬ್ತೀರಾ? ನೀವು ನಂಬ್ತೀರೋ, ಬಿಡ್ತೀರೋ ನಿಮಗೆ ಬೀಳುವ ಕನಸು ನಿಮ್ಮ ನಿಮ್ಮ ಜೀವನದಲ್ಲಿ ಸಂಭವಿಸುವ ಘಟನೆಗಳು, ನಿಮ್ಮ ಭವಿಷ್ಯದ ಸೂಚಕ. ಯಾವ ಕನಸು ಬಿದ್ರೆ ಯಾವ ಫಲ ಅಂತ ನೀವೇ ಓದಿ..


• ಕಾಮನಬಿಲ್ಲು ನಿಮ್ಮ ಕನಸಲ್ಲಿ ಬಂದ್ರೆ ನಿಮ್ಮ ಕುಟುಂಬಕ್ಕೆ ಅದೃಷ್ಟ ಒಲಿದು ಬಂತು ಅಂತ ಅರ್ಥ.
• ಪಿಂಕ್ ಕಲರ್ ವಸ್ತು, ಮೊಲದ ಮೇಲೆ ಕುಳಿತು ಸವಾರಿ ಮಾಡುವ ಕನಸು, ಚಿಟ್ಟೆ ಹಾರಾಡುವುದು, ಯುವತಿ, ಹಿಮಮಳೆ, ರಿಂಗ್ ತೊಡಿಸ್ತಾ ಇರೋ ಕನಸು ಬಿತ್ತೇನ್ರೀ… ಕೂಡಲೇ ಮದುವೆ ತಯಾರಿ ಮಾಡಿಕೊಳ್ಳಿ. ಇದು ಶೀಘ್ರ ವಿವಾಹ ಆಗಲಿದೆ ಎಂಬುದರ ಸಂಕೇತ.
• ಕನಸಲ್ಲಿ ಮೀನು ಬಿದ್ದರೆ ಶುಭದ ಸಂಕೇತ. ಆನೆ ಕಂಡರೆ ಸಂಪತ್ತು ಪ್ರಾಪ್ತಿಯಾಗುವ ಸೂಚನೆ.
• ನಿಮ್ಮ ಕನಸಲ್ಲಿ ನೀವು ಸತ್ತಂತೆ ಕಂಡರೆ ಸೋಲುವ ಸೂಚನೆ.
• ಚಂದದ ಬಟ್ಟೆ, ಎಣ್ಣೆ ಮಸಾಜ್, ಒಡೆದ ಕನ್ನಡಿ ನಿಮ್ಮ ಕನಸಲ್ಲಿ ಬಂದಿದ್ದೇ ಆದಲ್ಲಿ ಎಚ್ಚರದಿಂದಿರಿ ನಿಮಗೆ ಅನಾಹುತ ಎದುರಾಗಲಿದೆ ಎಂಬುದರ ಸೂಚಕ!
• ಗಾಳಿಯಲ್ಲಿ ನೀವು ಹಕ್ಕಿಯಂತೆ ಹಾರುವ ಕನಸು ಬಿದ್ದರೆ ಶೀಘ್ರದಲ್ಲೇ ಪ್ರಯಾಣದ ಯೋಗ.
• ಚುಂಬನದ ಕನಸು ಶತ್ರುಗಳು ನಿಮ್ಮನ್ನು ಮಟ್ಟ ಹಾಕಲು ಕಾಯ್ತಿದ್ದಾರೆ ಎಂಬುದರ ಸೂಚನೆ.
• ಕತ್ತರಿಸಿದ ಶವದ ಕೈ ಕನಸಲ್ಲಿ ಕಂಡರೆ ನಿಮ್ಮ ಹತ್ತಿರ ಸಂಬಂಧಿ ಸಾವಿನ ಸುದ್ದಿ ಕೇಳ್ತೀರಿ.


• ಕುದುರೆ ಮೇಲೆ ಸವಾರಿ ಮಾಡುವ ಕನಸು ಬಿದ್ರೆ ಯಶಸ್ಸಿನ ಸಂಕೇತ. ರಭಸವಾಗಿ ಸವಾರಿ ಮಾಡುವ ಕನಸು ಬಿತ್ತು ಅಂದ್ರೆ ನಿಮ್ಮ ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ಸಕ್ಸಸ್!
• ನಿಮ್ಮ ಕನಸಲ್ಲಿ ಬರುವ ಬೇಡದ ಅತಿಥಿ ಮುಂದಿನ ಅನಾಹುತ ಸಂಕೇತವಾಗಿರುತ್ತಾನೆ.
• ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುವ ಕನಸು ಬಿದ್ರೆ ದೈಹಿಕ ನೋವು ಎದುರಿಸುವ ಸೂಚನೆ.
• ಹಾಸಿಗೆಯಲ್ಲಿ ಮಲಗಿರುವ ಕನಸು ಕಣ್ರೆ ಯಶಸ್ಸಿನ ಸೂಚನೆ.
• ಹಾವು ಹಿಡಿದ, ಹಾವು ಕಚ್ಚಿದ ಕನಸು, ಕೈಯಲ್ಲಿ ಬೆಂಕಿ ಹಿಡಿದಿರುವ, ಮಾವಿನ ಮರ, ಗಂಧದ ಮರ, ಹಾಲು ಕುಡಿದ ಮಾವಿನ ಹಣ್ಣು ತಿಂದಂತಹ, ಬಿದ್ರೆ ಹಣ, ಸಂಪತ್ತಿನ ಸೂಚನೆ.
• ನಾಯಿ ಸಾಕಿದ ಅಥವಾ ಕಚ್ಚಿದ ಕನಸು ಬಿದ್ದರೆ ಸಂಕಟ, ಹಾರುವ ಹಕ್ಕಿ ಗೌರವ, ಸನ್ಮಾನದ ಸೂಚನೆ. ಕನಸಲ್ಲಿ ಕಾಣುವ ನವಿಲು ಶೋಕದ ಸಂಕೇತ.
• ಸೂರ್ಯೋದಯ ಅಥವಾ ಚಂದ್ರೋದಯದ ಕನಸು ಬಿದ್ರೆ ಒಳ್ಳೆಯ ಆರೋಗ್ಯ, ಉದ್ಯೋಗ, ಶಿಕ್ಷಣದ ಸಂಕೇತ.

• ದೇವಾಲಯ, ಮಸೀದಿ, ಚರ್ಚ್‍ಗೆ ಹೋದ ಕನಸು ಅಥವಾ ಕನಸಲ್ಲಿ ದೇವಾನು ದೇವತೆಗಳು ಕಂಡರೆ ಬಿದ್ದರೆ ಅದೃಷ್ಟ. ನಿಮಗೆ ಯಶಸ್ಸು ಸಿಗಲಿದೆ ಎಂಬುದರ ಸೂಚನೆ.
• ನೀವು ಹರಿದ ಬಟ್ಟೆ ಧರಿಸಿದ ಕನಸು ಬಿದ್ದರೆ ನಿಮ್ಮ ಆಪ್ತರು ನಿಮ್ಮನ್ನು ತೊರೆಯುತ್ತಾರೆ ಎಂಬುದರ ಸೂಚನೆ.
• ಬಿಳಿ ಬಟ್ಟೆ ಧರಿಸಿದ್ದರ ಕನಸು ಬಿದ್ದರೆ ನಿಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ ಎಂಬ ಸಂಕೇತ.
• ಹೆಣ್ಣು ಡ್ಯಾನ್ಸ್ ಮಾಡುವ, ನೀವೇ ಕಿವಿಯೋಲೆ ಧರಿಸಿಕೊಳ್ಳುವ, ಕೃಷಿಭೂಮಿಯಲ್ಲಿ ರೈತರು ಕೆಲಸ ಮಾಡುತ್ತಿರುವ ಕನಸು, ನೆಲ್ಲಿಕಾಯಿ ಅಥವಾ ತಾವರೆ ಕಂಡರೆ ಅದು ನಿಮಗೆ ಹಣ ಬರುವುದರ ಸೂಚನೆ.
• ರಾಜಕಾರಣಿಯ ಸಾವಿನ ಕನಸು ಬಿದ್ದರೆ ಇಡೀ ದೇಶಕ್ಕೆ ಆಪತ್ತು ಎದುರಾಗಿದೆ..!
• ಚಿನ್ನ, ಉಂಗುರು ಹಾಕುವ, ಅರಮನೆ ಕನಸಲ್ಲಿ ಬಿದ್ದರೆ ನಿಮಗೆ ಸಂಪತ್ತು, ಐಶ್ಚರ್ಯ ಪ್ರಾಪ್ತಿಯಾಗಲಿದೆ ಎಂದರ್ಥ.
• ನೀರಲ್ಲಿ ನಡೆದಾಡಿದ ಕನಸು ಬಿದ್ರೆ ಯಶಸ್ಸು, ಹಸಿರಿನಿಂದ ಕೂಡಿದ ಮರ ಬಂದ್ರೆ ಶುಭ, ಎಳೆಗಿಡ ಕಣ್ರೆ ಬಡತನ, ಒಣಗಿದ ಮರ ಕಣ್ರೆ ಅಸಂತೋಷ, ಹಳದಿ ಎಲೆಯ ಮರ ಕಣ್ರೆ ಅನಾರೋಗ್ಯ, ಒಣಗಿದ ಉದ್ಯಾನವನ ಕಷ್ಟಪ್ರಾಪ್ತಿ, ಕನಸಲ್ಲಿ ಕಾಣಿಸಿಕೊಳ್ಳುವ ತೋಳ ಶುತ್ರಗಳ ಭಯ, ಅಲ್ಲಾಡುವ ಪರ್ವತ ಆರೋಗ್ಯ ಸಮಸ್ಯೆಯ ಸೂಚನೆ.
• ಯುವತಿ ಜೊತೆ ಸರಸ/ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಕನಸು ಬಿದ್ದರೆ ಧನ, ಸಂಪತ್ತಿನ ಸೂಚನೆ.


• ಯಾರದರು ನಿಮಗೆ ಚುಂಬನ ಕೊಡುವ ಕನಸು ಬಿದ್ರೆ ಶತ್ರುಗಳು ನಿಮ್ಮನ್ನು ಮಟ್ಟ ಹಾಕಲು ಕಾಯ್ತಿದ್ದಾರೆ ಎಂಬುದರ ಸೂಚನೆ.

ಇನ್ನೂ ಇದೆ… ಕನಸುಗಳಿಗೆ ಮಿತಿ ಇದೆಯೇ..? ಸದ್ಯಕ್ಕೆ ಇಷ್ಟು ಕನಸುಗಳ ಸೂಚನೆ ಸಾಕೇನೋ.. .

Share post:

Subscribe

spot_imgspot_img

Popular

More like this
Related

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ

ಮಂಡ್ಯದಲ್ಲಿ ಮನಕಲಕುವ ಘಟನೆ: ಸಾವಿನಲ್ಲೂ ಒಂದಾದ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ...

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!

ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ...

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...