ಒಂದೊಳ್ಳೆ ಸಿನಿಮಾ ಕೂತಲ್ಲಿಂದ ಕದಲದಂತೆ ಪ್ರೇಕ್ಷಕರನ್ನು ಕೂರಿಸಿಕೊಂಡಿರುತ್ತೆ. ಮುಂದೇನಾಗುತ್ತೆ.. ಮುಂದೇನಾಗುತ್ತೆ ಅನ್ನೋ ಕುತೂಹಲವನ್ನು ಕೊನೇತನಕ ಕಾಯ್ದಿರಿಸಿಕೊಂಡು ಹೋಗುತ್ತೆ! ಪಕ್ಕಾ ಮನರಂಜೆನ ಜೊತೆಗೆ ಒಂದೊಳ್ಳೆ ಸಂದೇಶ ಕೂಡ ಆ ಸಿನಿಮಾದಲ್ಲಿ ಅಡಗಿರುತ್ತೆ..! ಅದು ಥಿಯೇಟರಿಂದ ಹೊರ ಬಂದ ಮೇಲೂ ಕಾಡುತ್ತೆ… ಥಿಯೇಟರಿಂದ ಆಚೆ ಬಂದ್ಮೇಲೆ ಆ ಸಿನಿಮಾ ಬಗ್ಗೆ ಜನ ಮಾತಾಡಿಕೊಳ್ತಾರೆ ಅಂದ್ರೆ ಆ ಸಿನಿಮಾ ಗೆದ್ದಂತೆ..! ಇಂಥಾ ಒಂದು ಪಕ್ಕಾ ಪೈಸಾ ವಸೂಲಿ ಸಿನಿಮಾ ಶಿವಾಜಿ ಸೂರತ್ಕಲ್.
ರಮೇಶ್ ಅರವಿಂದ್ ಅಭಿನಯದ, ಆಕಾಶ್ ಸುರತ್ಕಲ್ ನಿರ್ದೇಶನದ ಶಿವಾಜಿ ಸುರತ್ಕಲ್ ನಿರೀಕ್ಷೆಗೂ ಮೀರಿದ ಸಿನಿಔತಣವನ್ನು ಸಿನಿರಸಿಕರಿಗೆ ನೀಡಿದೆ. ನಿಗೂಢ ಸಾವಿನ ಪ್ರಕರಣದ ಸುತ್ತ ಕಥೆ ಸುತ್ತುತ್ತದೆ. ಆ ಒಂದು ಕೊಲೆ ಪ್ರಕರಣ ಹಾಗೂ ನಾಯಕ ಶಿವಾಜಿ ಸುರತ್ಕಲ್ ಗೆ ಕಾಡುವ ಪತ್ನಿ ಜನನಿ (ರಾಧಿಕಾ ನಾರಾಯಣ್) ನಿಗೂಢ ಸಾವು. ಕೊನೆಯಲ್ಲಿ ಎಲ್ಲದಕ್ಕೂ ಉತ್ತರ..
ರಣಗಿರಿ ಎಂಬಲ್ಲಿ ಸಚಿವರ ಮಗನ ಸಾವು.. ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನು ಬೇಧಿಸುವ ಜವಬ್ದಾರಿ ಹೊತ್ತ ಶಿವಾಜಿ ಸುರತ್ಕಲ್..ಅವರಿಗೆ ಎದುರಾಗುವ ಸವಾಲುಗಳು , ಸಸ್ಪೆನ್ಸ್ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಡುತ್ತದೆ.ರಮೇಶ್ ಅರವಿಂದ್ ಅವರ 101ನೇ ಸಿನಿಮಾ ಇದಾಗಿದ್ದು, ಅವರ ನಟನೆಯಂತು ಅತ್ಯಾದ್ಭುತ. ಸಿನಿಮಾದುದ್ದಕ್ಕೂ ಅವರೊಡನೆ ಇರುವ ಗೋವಿಂದ ಪಾತ್ರದಾರಿ ರಘು ರಮಣಕೊಪ್ಪ ಹಾಸ್ಯದ ಪಂಚ್ಗೆ ಫುಲ್ ಮಾರ್ಕ್ಸ್ ಕೊಡ್ಲೇ ಬೇಕು. ಇನ್ನುಳಿದಂತೆ ರಾಧಿಕಾ ನಾರಾಯಣ್, ಅವಿನಾಶ್, ರಮೇಶ್ ಪಂಡಿತ್, ರೋಹಿತ್ ಭಾನುಪ್ರಕಾಶ್ ನಟನೆ ಕೂಡ ತುಂಬಾ ಇಷ್ಟವಾಗುತ್ತೆ. ಸಂಗೀತ, ಕ್ಯಾಮರಾ ಕೈಚಳಕ ಸೇರಿದಂತೆ ಇಡೀ ಶಿವಾಜಿ ಸುರತ್ಕಲ್ ಟೀಮ್ ಶ್ರಮದಿಂದ ಒಂದೊಳ್ಳೆ ಮೂವಿ ಬಂದಿದೆ. ಒಟ್ನಲ್ಲಿ ಪಕ್ಕಾ ಸಸ್ಪೆನ್ಸ್ ‘ಶಿವಾಜಿ ಸುರತ್ಕಲ್’ ನಿಮ್ಗೂ ಇಷ್ಟವಾಗುತ್ತೆ ಅನ್ನೋದ್ರಲ್ಲಿ ಡೌಟಿಲ್ಲ.
ಚಿತ್ರ: ಶಿವಾಜಿ ಸುರತ್ಕಲ್
ನಿರ್ದೇಶಕ: ಆಕಾಶ್ ಶ್ರೀವತ್ಸ
ನಿರ್ಮಾಪಕ: ರೇಖಾ.ಕೆ.ಎನ್, ಅನೂಪ್ ಗೌಡ
ತಾರಗಣ : ರಮೇಶ್‍ಅರವಿಂದ್, ರಾಧಿಕಾ ನಾರಾಯಣ್, ಆರೋಹಿ, ಅವಿನಾಶ್, ರಘು ರಾಮನಕೊಪ್ಪ, ಇತರರು.
ಸಂಗೀತ: ಜ್ಯೂಡಾ ಸ್ಯಾಂಡಿ
ಛಾಯಾಗ್ರಹಣ: ಗುರುಪ್ರಸಾಧ್.ಎಂ.ಜಿ
ರೇಟಿಂಗ್ : 4.5/5
-ರಘುಭಟ್