ಪ್ರತಿಯೊಬ್ಬರ ಜೀವನ ಕನಸುಗಳು ಬೇರೆ ಬೇರೆ. ಆದರೆ, ಆ ಪ್ರತಿಯೊಬ್ಬರಲ್ಲೂ ಸಾಮಾನ್ಯವಾಗಿರುವ ಕನಸು ದುಡ್ಡು..! ಎಂಥಾ ಕೋಟ್ಯಧಪತಿಯಾದರೂ ಹೆಚ್ಚು ಹೆಚ್ಚು ದುಡ್ಡು ಮಾಡುವ ಕನಸನ್ನು ಕಾಣುತ್ತಾ ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುತ್ತಿರುತ್ತಾನೆ. ದುಡ್ಡು ಮಾಡಬೇಕೆನ್ನುವುದು ಎಲ್ಲರ ಇಚ್ಛೆ.
ಅಧಿಕೃತವಾಗಿ, ಯಾವುದೇ ಅಡ್ಡ ದಾರಿ ಹಿಡಿಯದೇ ನೀವು ದುಡ್ಡು ಮಾಡಬಹುದು..! ಅದು ವರ್ಲ್ದ್ ಕಪ್ ನಲ್ಲಿ.
ವರ್ಲ್ಡ್ ಕಪ್ ನಲ್ಲಿ ದುಡ್ಡು ಮಾಡುವುದು ಎಂದರೆ ಬೆಟ್ಟಿಂಗ್..ಇದು ಕಾನೂನುಬಾಹಿರ, ಸಿಕ್ಕಾಕಿಕೊಂಡರೆ ಹೊಗೆ ಎನ್ನುತ್ತಿದ್ದೀರ? ಬೆಟ್ಟಿಂಗ್ ತಪ್ಪು, ಅದನ್ನು ನಾವು ಕೂಡ ಹೇಳುತ್ತೇವೆ. ಬೆಟ್ಟಿಂಗ್ ಗೆ ಪ್ರೋತ್ಸಾಹ ಕೊಡುವ ದಡ್ಡರಲ್ಲ ನಾವು.
ನೀವು ಡ್ರೀಮ್ 11 ಆ್ಯಪ್ ಬಗ್ಗೆ ಈಗಾಗಲೇ ಕೇಳಿರುತ್ತೀರಾ. ಈ ಡ್ರೀಮ್ 11 ನಲ್ಲಿ ದುಡ್ಡು ಮಾಡಬಹುದು.
15 ರೂ ಹಾಕಿ 50 ಸಾವಿರದಿಂದ 1ಲಕ್ಷದವರೆಗೆ ಬೆಲ್ಲ ಬಹುದು. 30, 33 49 ರೂ ಹೀಗೆ ಸಣ್ಣ ಮೊತ್ತದ ಹಣ ಮತ್ತು ಸಾವಿರಾರು ರೂ ಹಣ ಹಾಕಬಹುದು. ಆ ಬಗ್ಗೆ ಡ್ರೀಮ್ 11 ಆ್ಯಪ್ ನಲ್ಲಿ ಆಯಾಯ ಪಂದ್ಯಕ್ಕೆ ವಿಭಿನ್ನವಾಗಿ ಲೆಕ್ಕಾಚಾರ ಇದೆ..
ಆಡುವ ಎರಡು ತಂಡಗಳ ಆಟಗಾರರನ್ನು ಸೇರಿಸಿ ನಿಮ್ಮ “ಡ್ರೀಮ್ 11 ” ಟೀಮ್ ಮಾಡಬೇಕು. ಅದಕ್ಕೆ ಒಬ್ಬ ನಾಯಕ, ಒಬ್ಬ ಉಪನಾಯಕ ಮಾಡಬೇಕು. ಅವರ ಆಟಕ್ಕೆ ಹೆಚ್ಚಿನ ಅಂಕ. ನಾಯಕ ಉಪನಾಯಕ ಎಲ್ಲರಿಗಿಂತ ಹೆಚ್ಚು ಚೆನ್ನಾಗಿ ಆಡಿದರೆ ದುಡ್ಡು ನಿಮ್ಮದೇ. ನಿಮ್ಮ ಟೀಮ್ ನ 11 ಮಂದಿಯಲ್ಲಿ ಗರಿಷ್ಠ ಒಂದು ಟೀಮ್ ನಿಂ 7 ಮಂದಿಯನ್ನು ಪಡೆಯಬಹುದು. ಈಗಾಗಲೇ ವರ್ಲ್ಡ್ ಕಪ್ ಶುರುವಾಗಿದೆ.
ಆದರೆ ಅದೃಷ್ಟ ಮಾತ್ರ ಬೇಕು ಬಿಡಿ.