ಸಂಗೀತ ಭಟ್ ಕನ್ನಡದ ಕೆಲವೊಂದಷ್ಟು ಚಿತ್ರಗಳಲ್ಲಿ ಅಭಿನಯಿಸಿ ತಕ್ಕಮಟ್ಟಿಗೆ ಹೆಸರನ್ನು ಮಾಡಿರುವ ನಟಿ. ಇನ್ನು ಇತ್ತೀಚೆಗಷ್ಟೇ ಸುದರ್ಶನ್ ರಂಗಪ್ರಸಾದ್ ಅವರ ಸ್ಟಾಂಡಪ್ ಕಾಮಿಡಿ ವಿಡಿಯೋ ಒಂದು ಯೂಟ್ಯೂಬ್ ನಲ್ಲಿ ವಿವಾದವನ್ನು ಸೃಷ್ಟಿಸಿತ್ತು. ಈ ವಿಡಿಯೋದಲ್ಲಿ ಎಷ್ಟ ಅವರಿಗೆ ಅವಮಾನ ಮಾಡಲಾಗಿದೆ ಎಂದು ಯಶ್ ಅಭಿಮಾನಿಗಳು ಸುದರ್ಶನ್ ಅವರ ವಿರುದ್ಧ ರೊಚ್ಚಿಗೆದ್ದು ಸೋಷಿಯಲ್ ಮೀಡಿಯಾದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಈ ಬಗ್ಗೆ ಸುದರ್ಶನ್ ರಂಗ ಪ್ರಸಾದ್ ಅವರು ಸಹ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದರು.
ಇನ್ನು ಇಷ್ಟಕ್ಕೇ ಸುಮ್ಮನಿರದ ಕೆಲ ಯಶ್ ಅಭಿಮಾನಿಗಳು ಸುದರ್ಶನ್ ಅವರ ಪತ್ನಿ ನಟಿ ಸಂಗೀತಾ ಭಟ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ಪೋಸ್ಟ್ ಮತ್ತು ಕಾಮೆಂಟ್ ಗಳನ್ನು ಮಾಡುವುದರ ಮೂಲಕ ಅವಮಾನ ಮಾಡುತ್ತಿದ್ದಾರೆ. ಇನ್ನು ಈ ಕಾಮೆಂಟ್ ಮತ್ತು ಪೋಸ್ ಗಳ ಸ್ಕ್ರೀನ್ ಶಾಟ್ ಗಳನ್ನು ಸಂಗೀತ ಭಟ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಾಕಿ ಯಶ್ ಅವರು ಇದನ್ನು ನೋಡಲಿ , ಅವರ ಅಭಿಮಾನಿಗಳು ಮಾಡಿರೋದು ಸರಿ ಎನಿಸಿದರೆ ಸುಮ್ಮನಿರಲಿ ಅಥವಾ ತಪ್ಪು ಅನ್ನಿಸಿದರೆ ಅವರಿಗೆ ಕೊಂಚವಾದರೂ ಬುದ್ಧಿ ಹೇಳಲಿ ಎಂದು ಹಾಕಿಕೊಂಡಿದ್ದಾರೆ.