ಬರುತಿದ್ದಂತೆ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಎದೆಯಾ ಇಲ್ಲವೇ ಎಂಬ ಪ್ರಶ್ನೆಗಳು ಕಾಡಲು ಶುರುವಾಗುತ್ತವೆ. ಆದ್ದರಿಂದಲೇ ಚುನಾವಣಾ ಆಯೋಗವು ಮತದಾರರಿಗೆ ಸಹಾಯವಾಗಲೆಂದು ಸಹಾಯವಾಣಿ ಸಂಖ್ಯೆ 1950 ನೀಡಿದೆ. ಅದೇ ರೀತಿ ಮತದಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣೆ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದೆ.
ಇನ್ನು ‘1950’ಈ ಸಹಾಯವಾಣಿ ಸಂಖ್ಯೆಯಿಂದ ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರು ಇದೆಯಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಬಹುದು. 1950 ಈ ಸಂಖ್ಯೆಗೆ ಎಸ್‍ಎಂಎಸ್ ಮಾಡುವ ಮುಖಾಂತರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯಾ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು. ಜೊತೆಗೆ ಯಾವ ಮತಗಟ್ಟೆಯಲ್ಲಿ ನಿಮ್ಮ ಹೆಸರು ಇದೆ ಎಂಬುದರ ಕುರಿತು ಫುಲ್ ಡಿಟೇಲ್ಸ್ ನಿಮಗೆ ಲಭ್ಯವಾಗಲಿದೆ. ಈ ಸಹಾಯವಾಣಿ ಸೇವೆ ಬೆಳಿಗ್ಗೆ 9 ರಿಂದ ರಾತ್ರಿ 9 ಘಂಟೆಯವರೆಗೂ ಇರುತ್ತದೆ. ಉಚಿತವಾಗಿ ಕರೆ ಮಾಡಬಹುದು.