ನಿಯಂತ್ರಣ ತಪ್ಪಿದ ಬಸ್: ರೈಲು ಹಳಿಯ ಮೇಲೆ ಬಿದ್ದು ನಾಲ್ವರು ಸಾವು !

Date:

ಜೈಪುರ: ನಿಯಂತ್ರಣ ತಪ್ಪಿದ ಬಸ್ವೊಂದು ರೈಲು ಹಳಿಯ ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯರಾತ್ರಿ 2:15ಕ್ಕೆ ಮೇಲ್ಸೇತುವೆಯಿಂದ ದೌಸಾದ ರೈಲ್ವೆ ಹಳಿ ಮೇಲೆ ಬಸ್ ಬಿದ್ದು, ದುರಂತ ಸಂಭವಿಸಿದೆ. 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಹರಿದ್ವಾರದಿಂದ ಉದಯಪುರಕ್ಕೆ ತೆರಳುತ್ತಿತ್ತು.
ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹೆಚ್ಚುವರಿ ತನಿಖೆ ನಡೆಸಲಾಗುತ್ತಿದೆ ಎಂದು ದೌಸಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜ್ಕುಮಾರ್ ಕಸ್ವಾ ತಿಳಿಸಿದ್ದಾರೆ. ಸಂಬಂಧಪಟ್ಟ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ ಕಾರವಾರ:...

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ!

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ! ಬೆಂಗಳೂರು:...

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರ

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರಬೆಳಗಾವಿ: ಇರಾನ್ ಮತ್ತು...

ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ!

ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ಇಂದು ಚಾಲನೆ! ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗ...