No menu items!
9.6 C
Munich
Tuesday, April 21, 2026

ವೈಟ್‌ಫೀಲ್ಡ್ ಪೊಲೀಸರ ಕಾರ್ಯಾಚರಣೆ: ಡ್ರಗ್ ಪೆಡ್ಲರ್ ಬಂಧನ

Must read

ವೈಟ್‌ಫೀಲ್ಡ್ ಪೊಲೀಸರ ಕಾರ್ಯಾಚರಣೆ: ಡ್ರಗ್ ಪೆಡ್ಲರ್ ಬಂಧನ

ಬೆಂಗಳೂರು ನಗರದ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಒಡಿಶಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಲಿಂಗರಾಜ್ ದಾಸ್ ಎಂದು ಗುರುತಿಸಲಾಗಿದೆ.
ಆರೋಪಿ ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ಐಟಿ/ಬಿಟಿ ಉದ್ಯೋಗಿಗಳಿಗೆ ಡ್ರಗ್ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬಂಧಿತನಿಂದ ಸುಮಾರು ₹55 ಲಕ್ಷ ಮೌಲ್ಯದ 27 ಕೆಜಿ ಗಾಂಜಾ ಹಾಗೂ 3 ಕೆಜಿ 200 ಗ್ರಾಂ ಆ್ಯಶಿಸ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪಿಜಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಅಂಬೂರ್ ಗ್ಯಾಂಗ್ ಕಳ್ಳ ಬಂಧನ
ಪಿಜಿಗಳಲ್ಲಿ ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ಅಂಬೂರ್ ಮೂಲದ ಗ್ಯಾಂಗ್ ಸದಸ್ಯನನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸಂತೋಷ್ ಎಂದು ಗುರುತಿಸಲಾಗಿದೆ.
ಆರೋಪಿ ಪಿಜಿಗಳನ್ನು ಟಾರ್ಗೆಟ್ ಮಾಡಿ, ಬಾಗಿಲು ತೆರೆದು ಮಲಗಿದ್ದ ವೇಳೆ ಕ್ಷಣಾರ್ಧದಲ್ಲಿ ಲ್ಯಾಪ್‌ಟಾಪ್ ಕದ್ದು ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ ₹15 ಲಕ್ಷ ಮೌಲ್ಯದ 15 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.

- Advertisement -spot_img

More articles

- Advertisement -spot_img

Latest article