ಪ್ರಾಥಮಿಕ ತನಿಖೆ ವೇಳೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಕೆಲ ಪ್ರಭಾವಿ ವೀರಶೈವ ಮಠಾಧೀಶರ ಟೆಲಿಫೋನ್ ಸಂಭಾಷಣೆಗಳನ್ನು ಕದ್ದಾಲಿಸಲಾಗಿದೆ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು,
ಸಾವಿರಾರು ಟೆಲಿಫೋನ್ ಸಂಖ್ಯೆಗಳ ಕದ್ದಾಲಿಕೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ಅಧಿಕೃತವಾಗಿ ನೂರಾರು ಸಂಖ್ಯೆಗಳು ಕದ್ದಾಲಿಕೆ ಪಟ್ಟಿಯಲ್ಲಿದ್ದರೆ, ಇನ್ನುಳಿದ ಟೆಲಿಫೋನ್ ಸಂಭಾಷಣೆಗಳನ್ನು ಅನಧಿಕೃತವಾಗಿ ಕದ್ದಾಲಿಸಲಾಗಿದೆ ಎಂದು ಹೇಳಲಾಗಿದೆ. ಪ್ರಮುಖ ರಾಜಕೀಯ ನಾಯಕರ ಸೂಚನೆ ಮೇರೆಗೆ ಈ ಕದ್ದಾಲಿಕೆ ಮಾಡಲಾಗಿದೆ ಎಂಬ ಅಂಶ ಬಯಲಾಗಿದೆ.