ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್, ನವದೆಹಲಿಯು ನೀಟ್-ಪಿಜಿ 2021 ಪರೀಕ್ಷೆ ದಿನಾಂಕವನ್ನು ನಿಗದಿಪಡಿಸಿ ಪ್ರಕಟಣೆ ಹೊರಡಿಸಿದೆ. ವೇಳಾಪಟ್ಟಿ ಪ್ರಕಾರ ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಎಕ್ಸಾಮ್-ಪಿಜಿ 2021 ಪರೀಕ್ಷೆಯನ್ನು ಏಪ್ರಿಲ್ 18 ರಂದು ನಡೆಸಲಾಗುತ್ತದೆ.
ನೀಟ್-ಪಿಜಿ 2021 ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತವಾಗಿ ನಡೆಸಲಿದ್ದು, ಜೂನ್ 30, 2021 ರೊಳಗೆ ಇಂಟರ್ನ್‌ಶಿಪ್ ಮುಗಿಸಲಿರುವ ಅಭ್ಯರ್ಥಿಗಳು ಅಪ್ಲಿಕೇಶನ್ ಸಲ್ಲಿಸಬಹುದು.
ನೀಟ್-ಪಿಜಿ 2021 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆಸಕ್ತಿಹೊಂದಿರುವ ಅಭ್ಯರ್ಥಿಗಳು ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಅಫೀಶಿಯಲ್ ವೆಬ್‌ಸೈಟ್ www.nbe.edu.in ಮತ್ತು www.natboard.edu.in ಗೆ ಭೇಟಿ ನೀಡಿ ರೆಫರ್ ಮಾಡಬಹುದು.
ಅಭ್ಯರ್ಥಿಗಳು ಪರೀಕ್ಷೆಗೆ ಪಠ್ಯಕ್ರಮ ಮತ್ತು ಇತರೆ ಹೆಚ್ಚಿನ ಮಾಹಿತಿಗಳನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ ಅಧಿಕೃತ ವೆಬ್‌ಸೈಟ್ nbe.edu.in ಗೆ ಭೇಟಿ ನೀಡಿ ತಿಳಿಯಬಹುದು.
ನೀಟ್-ಪಿಜಿಯನ್ನು ವೈದ್ಯಕೀಯ ಸ್ನಾತಕೋತ್ತರ ಪದವಿಗಳಾದ ಎಂಡಿ, ಎಂಎಸ್, ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತದೆ.