ನೀರಿಲ್ಲ ನೀರಿಲ್ಲ ಅಗ್ನಿಶಾಮಕ ದಳದಲ್ಲಿ ನೀರಿಲ್ಲ !

0
39

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ದೊಡ್ಡ ಬೆಂಕಿ ದುರಂತ ಸಂಭವಿಸಿ ಸುಮಾರು ಒಂದು ವಾರ ಕಳೆದಿರಬಹುದು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನೀರಿನ ಅಭಾವ ಹಿನ್ನೆಲೆ ಸಣ್ಣ ಪ್ರಮಾಣದಲ್ಲಿ ಬೆಂಕಿ ನಂದಿಸಿ ಹೋಗಿದ್ದಾರೆ. ಇದೀಗ ಗೋಡನ್ ಸುತ್ತ ದಟ್ಟ ಹೊಗೆ ಹರಡಿದ್ದು, ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ. ಅಲ್ಲದೇ ಇದರಿಂದ ಅಗ್ನಿಶಾಮಕದಳಕ್ಕೆ ನೀರಿನ ಅಭಾವ ಎದುರಾಗಿರೋದು ಬಟಾಬಯಲಾಗಿದೆ. ದುರಂತ ನಡೆದು ವಾರ ಕಳೆದ್ರು ಇನ್ನೂ ಬೆಂಕಿ ಆರಿಲ್ಲ.
ಹೌದು, ಕಳೆದ ಭಾನುವಾರ ದೊಡ್ಡ ಗುಬ್ಬಿ ಗೋಡನ್ ಗೆ ಬೆಂಕಿ ಬಿದ್ದಿತ್ತು. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಬಾರಿ ಹರಸಾಹಸ ಮಾಡಿತ್ತು. ಅದ್ರೆ.. ಬೆಂಕಿ ನಂದಿಸಲು ಮುಖ್ಯವಾಗಿ ಬೇಕಾದ ನೀರಿನ ಅಭಾವ ಇತ್ತು. ಈ ಹಿನ್ನೆಲೆ ಬೆಂಕಿ ಬಿದ್ದ ಗೋಡನ್ ನಲ್ಲಿ ದೊಡ್ಡಮಟ್ಟದ ಬೆಂಕಿ ನಂದಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಸುಮ್ಮನಾಗಿದ್ದರು.


ಇದರಿಂದ ಗೋಡನ್ ಒಳಗೆ ಇರೋ ವಸ್ತುಗಳು ಇನ್ನೂ ಬೆಂಕಿಯ ಬೆಗುದಿಯಲ್ಲಿ ಉರಿಯುತ್ತಲ್ಲೆ ಇದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಮತ್ತೊಂದು ಸಮಸ್ಯೆ ಶುರುವಾಗಿದೆ. ನಿತ್ಯ ರಾತ್ರಿ ಹಗಲು ಎನ್ನದೇ ಗೋಡನ್ ನಿಂದ ಬೆಂಕಿಯ ಹೊಗೆ ಹೊರ ಬರ್ತಿದ್ದು, ಜನತೆ ಕಂಗಾಲಾಗಿದ್ದಾರೆ. ಇತ್ತ ಸ್ಥಳೀಯರು ದಿನನಿತ್ಯ ಬೆಂಕಿಯ ಕೆನ್ನಾಲಿಗೆಯಲ್ಲಿ ಉರಿಯುತ್ತಿರೋ ವಸ್ತುಗಳ ಹೊಗೆಯಿಂದ ಮನೆಯಿಂದ ಹೊರ ಬಾರದೆ ಹೈರಾಣಾಗಿದ್ದಾರೆ.


ಅಗ್ನಿಶಾಮಕ ದಳದವರು ಅಂದಿನಿಂದ ಇಂದಿನವರೆಗೂ ಈ ಕಡೆ ಬರ್ತಿಲ್ಲ. ಬೆಂಕಿಯ ಹೊಗೆಯಿಂದ ಅಕ್ಕಪಕ್ಕದ ಜನರಿಗೆ ಸಂಕಷ್ಟ ತಪ್ಪಿದ್ದಲ್ಲ. ಹೆಂಡತಿ, ಮಕ್ಕಳನ್ನ ತವರು ಮನೆಗೆ ಕಳುಹಿಸೋ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಪೂರ್ಣ ಬೆಂಕಿ ನಂದಿಸಬೇಕು ಅಂತ ಸ್ಥಳೀಯರು ಮನವಿ ಮಾಡಿದ್ದಾರೆ.