ನೀವು ಕೊಳ್ಳುವ ಬೆಳ್ಳಿ ನಕಲಿಯೋ ಅಸಲಿಯೋ ಹೇಗೆ ತಿಳಿಯುವುದು?

Date:

ಬಂಗಾರದಂತೆ ಬೆಳ್ಳಿ ಎಂದರೆ ಕೂಡಾ ಭಾರತೀಯರಿಗೆ ಸಾಂಪ್ರದಾಯ ಮತ್ತು ವ್ಯಾಮೋಹ. ಅಷ್ಟೇ ಅಲ್ಲ, ಬೆಳ್ಳಿಯು ಚರ್ಮ ವ್ಯಾಧಿಗಳು, ಕಣ್ಣಿನ ಇನ್ಫೆಕ್ಷನ್ ಹಾಗೂ ಇತರೆ ಕಾಯಿಲೆಗಳಿಗೆ ಒಳ್ಳೆಯದು ಅಂತಾ ನಂಬಲಾಗುತ್ತೆ. ಹಾಗಾಗಿಯೇ ಹೆಚ್ಚಿನ ಜನ ಬೆಳ್ಳಿ ಆಭರಣ ಧರಿಸಲು ಇಷ್ಟಪಡುತ್ತಾರೆ. ಈ ಸಾಫ್ಟ್ ಮೆಟಲ್ನ್ನು ಚೆನ್ನಾಗಿ ನೋಡಿಕೊಂಡಿರಾದರೆ ಜೀವನಪೂರ್ತಿ ಬಾಳಿಕೆ ಬರುತ್ತದೆ. ಬೆಲೆಯೂ ಕಡಿಮೆಯಾಗದು. ಆದರೆ, ನೀವು ಕೊಂಡ ಬೆಳ್ಳಿ ಅಸಲಿಯಾಗಿರಬೇಕಷ್ಟೇ. ಬೆಳ್ಳಿಯ ವಸ್ತು ಅಸಲಿಯೋ ನಕಲಿಯೋ ಎಂದು ತಿಳಿಯುವುದು ಹೇಗೆ? ಅದಕ್ಕಾಗಿ ಕೆಲವೊಂದು ಸಿಂಪಲ್ ಟೆಸ್ಟ್ಗಳು ಇಲ್ಲಿವೆ ನೋಡಿ.

ಲೇಬಲ್ ಪರೀಕ್ಷಿಸುವುದು
ಬೆಳ್ಳಿಯೋ ಅಸಲಿಯೋ ನಕಲಿಯೋ ಎಂದು ತಿಳಿಯಲು ಎಲ್ಲಕ್ಕಿಂತ ಸುಲಭ ವಿಧಾನ ಆಭರಣದ ಮೇಲಿರುವ ಲೇಬಲ್ ಪರೀಕ್ಷಿಸುವುದು. ಅದರಲ್ಲಿ ಸಣ್ಣದಾಗಿ ‘ಸ್ಟರ್’ ಅಥವಾ ‘ಸ್ಟರ್ಲಿಂಗ್’ ಎಂದು ಬರೆದಿದ್ದರೆ ಶೇ.92.5ಕ್ಕಿಂತಾ ಹೆಚ್ಚು ಬೆಳ್ಳಿ ಬಳಸಲಾಗಿದೆ ಎಂದರ್ಥ. ಆಭರಣದ ಮೇಲೆ ನೋಡಬೇಕಾಗಿರುವ ಇನ್ನೊಂದು ಮಾರ್ಕ್ ಎಂದರೆ ‘ಐಎಸ್’ ಎನ್ನುವುದು ಹಾಗೆಂದರೆ ಇಂಟರ್ನ್ಯಾಷನಲ್ ಸಿಲ್ವರ್ ಅಥವಾ ಸಿಲ್ವರ್ ಪ್ಲೇಟೆಡ್ ಎಂದರ್ಥ. ಬೆಳ್ಳಿಯು ದೇಶೀಯ ಅಥವಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಲೇ ಮಾರಾಟವಾದರೂ ಅದಕ್ಕೆ ಹಾಲ್ಮಾರ್ಕ್ ಇದ್ದೇ ಇರುತ್ತದೆ. ಹೀಗಾಗಿ, ಬೆಳ್ಳಿ ಕೊಳ್ಳುವಾಗ ಮೊದಲು ಸ್ಟೆರ್ಲಿಂಗ್ ಮಾರ್ಕ್ ಪರೀಕ್ಷಿಸಿ. ಅಂತಾರಾಷ್ಟ್ರೀಯ ಮಾರಾಟಗಾರರ ಬಳಿ ಬೆಳ್ಳಿ ಕೊಂಡಲ್ಲಿ ಅವುಗಳ ಮೇಲೆ 800, 900 ಅಥವಾ 925 ಎಂದಿರುತ್ತದೆ. ಇವು ಬೆಳ್ಳಿಯ ಗುಣಮಟ್ಟದ ಮಾನದಂಡಗಳು. ಹೀಗಿದ್ದರೆ ಅದರಲ್ಲಿ ಹೆಚ್ಚು ಬೆಳ್ಳಿ ಇದೆ ಎಂದರ್ಥ. ಈ ಸ್ಟ್ಯಾಂಪ್ ಹೊರತಾಗಿಯೂ ಅನುಮಾನವಿದ್ದಲ್ಲಿ ಮನೆಯಲ್ಲಿ ಈ ಪರೀಕ್ಷೆಗಳನ್ನು ಮಾಡಬಹುದು.

ಬ್ಲೀಚ್ ಟೆಸ್ಟ್
ಬ್ಲೀಚ್ ಕೂಡಾ ಬೆಳ್ಳಿಯ ಸಾಚಾತನ ಕಂಡುಕೊಳ್ಳಲು ಸಹಕರಿಸುತ್ತದೆ. ಬೆಳ್ಳಿಯ ವಸ್ತುವಿನ ಮೇಲೆ ಒಂದು ಹನಿ ಬ್ಲೀಚ್ ಹಾಕಿ. ಬೆಳ್ಳಿ ಬಣ್ಣಗುಂದಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದರೆ, ಅದು ಅಸಲಿ ಬೆಳ್ಳಿ ಎಂದು ನಂಬಬಹುದು. ಬ್ಲೀಚ್ನಂಥ ಆಕ್ಸಿಡೈಸಿಂಗ್ ಕೆಮಿಕಲ್ನೊಂದಿಗೆ ಸಿಲ್ವರ್ ಮೆಟಲ್ ತಾಕಿದಾಗ ಅದು ರಿಯಾಕ್ಷನ್ ಆಗಿ ಕಂದು ಬಣ್ಣಕ್ಕೆ ತಿರುಗುತ್ತದೆ.

ಐಸ್ ಕ್ಯೂಬ್ ಟೆಸ್ಟ್
ಬೆಳ್ಳಿಯ ನಾಣ್ಯಗಳು ಹಾಗೂ ಸಮತಟ್ಟಾದ ಮೇಲ್ಮೈ ಹೊಂದಿರುವ ಬೆಳ್ಳಿಯ ವಸ್ತುಗಳನ್ನು ಪರೀಕ್ಷಿಸಲು ಐಸ್ ಕ್ಯೂಬ್ ಟೆಸ್ಟ್ ಸೂಕ್ತ. ಬೆಳ್ಳಿಯ ಮೇಲ್ಮೈ ಮೇಲೆ ಐಸ್ ಕ್ಯೂಬ್ ಇಡಿ. ತಕ್ಷಣವೇ ಐಸ್ ಕರಗಿದಲ್ಲಿ ನೀವು ಕೊಂಡ ಬೆಳ್ಳಿ ಅಸಲಿ ಎಂದರ್ಥ. ಏಕೆಂದರೆ ಬೆಳ್ಳಿಯು ಅತ್ಯುತ್ತಮ ಉಷ್ಣ ವಾಹಕವಾಗಿದ್ದು, ಇದರ ಮೇಲೆ ಐಸ್ ತಕ್ಷಣ ಕರಗಲೇಬೇಕು.

ರಿಂಗ್ ಟೆಸ್ಟ್
ಇದು ಬಹಳ ಸಾಮಾನ್ಯವಾದ ಹಾಗೂ ಸುಲಭವಾದ ವಿಧಾನ. ಬೆಳ್ಳಿಯು ಪ್ಯೂರ್ ಆಗಿದ್ದರೆ ಅದನ್ನು ಮತ್ತೊಂದು ಮೆಟಲ್ ಅಥವಾ ಸಿಲ್ವರ್ ವಸ್ತುವಿನೊಂದಿಗೆ ತಿಕ್ಕಿದಾಗ ದೊಡ್ಡದಾದ ರಿಂಗಿಂಗ್ ಸದ್ದು ಬರುತ್ತದೆ. ನಿಮ್ಮ ಬಳಿ ಬೆಳ್ಳಿ ನಾಣ್ಯವಿದ್ದರೆ ಅದನ್ನು ನೆಲಕ್ಕೆಸೆದಾಗ ಬೆಲ್ ಬಾರಿಸಿದಂತೆ ದೊಡ್ಡ ಶಬ್ದ ಬರಬೇಕು. ಶಬ್ದದಲ್ಲಿ ತೂಕವಿಲ್ಲವೆಂದರೆ ಬೆಳ್ಳಿಗೆ ಬೇರೆ ಮೆಟಲ್ಗಳನ್ನು ಸೇರಿಸಲಾಗಿದೆ ಎಂದರ್ಥ.

ಮ್ಯಾಗ್ನೆಟ್ ಟೆಸ್ಟ್
ಮ್ಯಾಗ್ನೆಟ್ ಸಿಲ್ವರ್ ಆಕರ್ಷಿತವಾಗುವುದಿಲ್ಲ. ಅಯಸ್ಕಾಂತವೊಂದನ್ನು ಬೆಳ್ಳಿಯ ವಸ್ತುವಿನ ಬಳಿ ತಂದಾಗ ಅದು ಆಕರ್ಷಿತವಾದರೆ, ಅದನ್ನು ನಕಲಿ ಬೆಳ್ಳಿ ಎಂದು ತಿಳಿಯಬಹುದು.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...