ನೀವು ನೋಡುವ ಮುನ್ನವೆ ವಾಟ್ಸ್ ಆ್ಯಪ್ ನಲ್ಲಿ ನಿಮಗೆ ಬಂದ ಮೆಸೇಜ್ ಡಿಲೀಟ್ ಆದ್ರೆ, ಅದನ್ನ ನೋಡಬಹುದು.. ಅದಕ್ಕೆ ಹೀಗೆ ಮಾಡಿ ಸಾಕು..
ತಂತ್ರಜ್ಞಾನ ಹಾಗೆ ಎದುರಾಳಿ ಸ್ಪರ್ಧಿಗಳು ಅಧಿಕವಾಗುತ್ತಿದಂತೆ ಹೊಸ ರೀತಿ ಅನ್ವೇಷಣೆಗಳು ಸಾಮಾನ್ಯ.. ಅದರಲ್ಲೂ ಮೊಬೈಲ್ ಆಪ್ ಗಳ ವಿಚಾರದಲ್ಲಿ ದಿನಕ್ಕೊಂದು ಅಪ್ ಡೇಟ್ ಗಳು ಬರ್ತಾನೆ ಇರುತ್ತೆ.. ಸದ್ಯ ಫೇಸ್ ಬುಕ್ ಹಾಗೆ ವಾಟ್ಸ್ ಆಪ್ ಗಳನ್ನ ನಮ್ಮ ದೇಶದಲ್ಲಿ ಅಧಿಕವಾಗಿ ಬಳಸುತ್ತಾರೆ.. ಹೀಗಾಗೆ ತನ್ನ ಗ್ರಾಹಕರಿಗೆ ಬೇಕಾದ ಸೌಲಭ್ಯಗಳನ್ನ ಒದಗಿಸುವುದರಲ್ಲಿ ಇವು ಸಹ ಬ್ಯುಸಿಯಾಗಿವೆ..
ವಾಟ್ಸ್ ಆಪ್ ಮೆಸೆಂಜರ್ ಅಂತು ದೈನಂದಿನ ಜೀವನದ ಭಾಗವಾಗಿದ್ದು ಈ ಆಪ್ ನಲ್ಲು ಸಹ ಹಲವು ಅಪ್ ಡೇಟ್ ಗಳನ್ನ ನೀವು ನೋಡಿದ್ದೀರಿ.. ಸದ್ಯಕ್ಕೆ ತನ್ನ ಗ್ರಾಹಕರಿಗೆ ಹೊಸ ಹೊಸ ಅಪ್ ಡೇಟ್ ಗಳನ್ನ ನೀಡುತ್ತಿರುವ ವಾಟ್ಸ್ ಆಪ್, ಕಳಸಿದ ಮೆಸೇಜ್ ಗಳನ್ನ ಡಿಲೀಟ್ ಮಾಡುವ ಆಯ್ಕೆಯನ್ನ ನೀಡಿದೆ…
ಹೀಗೆ ಯಾವ ವ್ಯಕ್ತಿ ಮೆಸೇಜ್ ಕಳುಹಿಸುತ್ತಾನೆ ಆ ವ್ಯಕ್ತಿ ಅದೇ ಮೆಸೇಜ್ ಅನ್ನ ಡಿಲೀಟ್ ಮಾಡಿದ್ರೆ ‘ದಿಸ್ ಮೆಸೇಜ್ ವಾಸ್ ಡಿಲೀಟೆಡ್‘ ಅಂತ ಬರೋದನ್ನ ನೀವು ನೋಡಿರುತ್ತೀರಾ.. ಹಾಗಿದ್ರೆ ಹೀಗೆ ಡಿಲೀಟ್ ಮಾಡಲಾದ ಮಸೇಜ್ ಗಳನ್ನ ನೋಡೋಕೆ ಸಾಧ್ಯವಿಲ್ವ ಅನ್ನೋ ಪ್ರಶ್ನೆ ನಿಮ್ಮಲ್ಲಿದ್ರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ..
ವಾಟ್ಸ್ ಆಪ್ ನಲ್ಲಿ ಡಿಲೀಟ್ ಮಾಡಲಾದ ಮೆಸೇಜ್ ಗಳನ್ನ ನೋಡ ಬಹುದು.. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೆ.. ನೋಟಿಸೇವ್ (Notisave) ಎಂಬ ಆಪ್ ಅನ್ನ ಪ್ಲೇ ಸ್ಟೋರಿನಿಂದ ಇನ್ಸ್ಟಾಲ್ ಮಾಡಿಕೊಳ್ಳಬೇಕು.. ಆನಂತರ ನಿಮ್ಮ ವಾಟ್ಸ್ ಆಪ್ ಗೆ ಬರುವ ಸಂದೇಶಗಳ ನೋಟಿಫಿಕೇಷನ್ ನೋಟಿಸೇವ್ ನಲ್ಲಿ ಸ್ಟೋರ್ ಆಗುತ್ತೆ ಸೆಟಿಂಗ್ ಮಾಡಿಕೊಳ್ಳಬೇಕು.
ಹೀಗಾಗೆ ಆ ಕ್ಷಣದಲ್ಲಿ ವಾಟ್ಸ್ ಅಪ್ ನಲ್ಲಿ ಬಂದ ಸಂದೇಶವನ್ನ ಕಳುಹಿಸಿದವರು ಡಿಲೀಟ್ ಮಾಡಿಬಿಟ್ರು, ಅದು ನೋಟಿಸೇವ್ ಆಪ್ ನ ಮೂಲಕ ನಿಮಗೆ ಕಾಣಿಸುತ್ತೆ.. ಈ ಮೂಲಕ ಡಿಲೀಟ್ ಆದ ಮೆಸೇಜ್ ಗಳನ್ನ ನೋಡಬಹುದಾದ ಆಯ್ಕೆ ಈ ಆಪ್ ಮಾಡುಕೊಡುತ್ತೆ