ನೀವು ಕೂಡ ವಕೀಲರಾಗಿದ್ದು. ಪಕ್ಷಾಂತರ ಕಾಯ್ದೆ ಬಗ್ಗೆ ಮಾತನಾಡುವ ನೀವು? ಪಕ್ಷಾಂತರ ಮಾಡಿಲ್ಲವೇ ಎಂದು ಪ್ರಶ್ನಿಸಿದರು. ನೀವು ಮಾತ್ರ ಜೆಡಿಎಸ್ ತೊರೆದು ಅಹಿಂದ ಕಟ್ಟುವ ನೆಪವೊಡ್ಡಿ ಕಾಂಗ್ರೆಸ್ ಸೇರಬಹುದು.ಬೇರೆಯವರು ಸೇರಬಾರದು ಎಂಬುದು ಎಷ್ಟು ಸರಿ ಸ್ವಾಮಿ ಸಿದ್ದರಾಮಯ್ಯ ಅವರಿಗೆ ಶ್ರೀ ರಾಮಲು ಪರೋಕ್ಷವಾಗಿ ಪ್ರಶ್ನಿಸುದರು.
ನರೇಂದ್ರ ಮೋದಿ ಮತ್ತು ಯಡಿಯೂರಪ್ಪನವರ ನೇತೃತ್ವದಲ್ಲಿ ಉತ್ತಮ ಆಡಳಿತ ನಡೆಯುತ್ತಿದ್ದು ಇನ್ನೂ ಮೂರುವರೆ ವರ್ಷಗಳ ಕಾಲ ಸರಕಾರ ನಡೆಸಲು ಉಪಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಸರಕಾರ ಭದ್ರಗೊಳಿಸಬೇಕು ಎಂದು ರಾಮಲು ಮನವಿ ಮಾಡಿದರು