ನೀವು ಶ್ರೀಮಂತರಾಗಬೇಕೆ?

Date:

ಬಹುತೇಕರಿಗೇನು … ಬಹುತೇಕ ಎಲ್ಲರಿಗೂ ಇರುವ ಸಾಮಾನ್ಯ ಆಸೆ ಶ್ರೀಮಂತರಾಗುವುದು … ಶ್ರೀಮಂತರಿಗೆ ಮತ್ತಷ್ಟು ಶ್ರೀಮಂತರಾಗುವ ಆಸೆ …! ಶ್ರೀಮಂತರಾಗಬೇಕು ಎಂದು ಸಾಮಾನ್ಯವಾಗಿ ಎಲ್ಲರೂ ಬಯಸುತ್ತೇವೆ..ತಪ್ಪೇನಿಲ್ಲ … ಬಡವರಾಗಿ ಹುಟ್ಟುವುದು ತಪ್ಪಲ್ಲ … ಬಡವರಾಗಿಯೇ ಸಾಯುವುದು ತಪ್ಪು ಎಂಬ ಮಾತಿನಂತೆ … ಜೀವನದಲ್ಲಿ ಸುಧಾರಣೆ ಕಾಣಲೇಬೇಕು … ಆ ನಿಟ್ಟಿನಲ್ಲಿ ಮಾರ್ಗದರ್ಶಿ‌ ಇಲ್ಲಿದೆ..

* ಶ್ರೀಮಂತರಾಗಲು ಉಳಿತಾಯ ಮಾಡಬೇಕು ‌.. ಇಲ್ಲವೇ ಗಳಿಕೆ ಹೆಚ್ಚಳವಾಗಬೇಕು … ಗಳಿಕೆ ಹೆಚ್ಚಳ ಎಲ್ಲಾ ಸಂದರ್ಭದಲ್ಲೂ ನಮ್ಮ ಕೈಯಲ್ಲಿರಲ್ಲ … ಉಳಿತಾಯ ಮಾಡುವುದು ಮಾತ್ರ ನಮ್ಮ ಕೈಯಲ್ಲಿರುತ್ತದೆ …. ಹಾಗಾಗಿ ನಾವು ಹೆಚ್ಚು ಹೆಚ್ಚು ಉಳಿತಾಯದ ಪದ್ಧತಿ ಅಭ್ಯಾಸ ಮಾಡಿಕೊಳ್ಳಬೇಕು ..

* ಅಯ್ಯೋ ನಮ್ಮ ದುಡಿಮೆ ಇಷ್ಟೇ … ಇದರಲ್ಲಿ ತಿಂಗಳು ದಬ್ಬುವುದೇ ಕಷ್ಟ … ಹೀಗಿರುವಾಗ ಉಳಿತಾಯ ಎಲ್ಲಿ ಎಂಬ ಪ್ರಶ್ನೆ ಬೇಡ … ಒಂದಿಷ್ಟು ಹಣ ಅಂತ ನೀವು ಎತ್ತಿಡಲೇಬೇಕು …

ದುಡಿಮೆಯಲ್ಲಿ ನಿರ್ಧಿಷ್ಟವಾದ ಒಂದು ಪಾಲನ್ನು ನಿಮ್ಮ ನಾಳೆಗಾಗಿ ನೀವು ಉಳಿತಾಯ ಮಾಡಿ. ಆದಾಯ ಎಷ್ಟೇ ಕಡಿಮೆ ಇದ್ದರೂ ಒಂದು ಪುಟ್ಟಪಾಲು ಉಳಿತಾಯವಾಗಲಿ. ಆದಾಯ ಹೆಚ್ಚಿದಂತೆ ಉಳಿತಾಯ ಕೂಡ ಹೆಚ್ಚು ಮಾಡಿ.

* ಉಳಿತಾಯದ ದೃಷ್ಟಿಯಿಂದ ಅಟೋಮೆಟಿಕ್ ಬ್ಯಾಂಕ್ ಟ್ರಾನ್ಸ್ ಫರ್ ಆರಂಭಿಸಿ .. ಈ ಮೂಲಕ ಉಳಿತಾಯ ಮಾಡಬಹುದು . ಉತ್ತಮ ಲಾಭ ಬರುವ ಕಡೆ ಹೂಡಿಕೆ ಮಾಡಿ … ನೀವು ಸರಿಯಾದ ಕಡೆ ಹೂಡಿಕೆ ಮಾಡಿದ್ದೇ ಆದಲ್ಲಿ ನಿಮ್ಮ ಹಣ ದುಪ್ಪಟ್ಟಾಗುವುದರಲ್ಲಿ ಡೌಟಿಲ್ಲ ….

ಶ್ರೀಮಂತರಾಗುವುದು ಎಂದರೆ ಜುಗ್ಗರಾಗುವುದಲ್ಲ … ಕಂಜೂಸ್ ಗಳೆಂಬ ಅರ್ಥ ಬೇಡ .. ಖರ್ಚಿನ ಮೇಲೆ ನಿಗಾ ಇರಲಿ … ಖರ್ಚು ಕಡಿಮೆ ಮಾಡಿ ಹಣ ಉಳಿಸಿ.

ಖರ್ಚು ಕಡಿಮೆ ಮಾಡುವುದು ಎಂದರೆ ಖಂಡಿತವಾಗಿಯೂ ಕಂಜೂಸಲ್ಲ.  ಬೇಕಾದುದಕ್ಕೆ ಖರ್ಚು ಮಾಡಿ .. ಮಿತಿ ಇರಲಿ.

ವೃತ್ತಿಪರರು, ಯಶಸ್ವಿ ವ್ಯಕ್ತಿಗಳ ಒಡನಾಟವಿರಲಿ … ತಿಳಿದೋ ತಿಳಿಯದೇ ಅವರಿಂದ ನಿಮಗೆ ಟಿಪ್ಸ್ ಸಿಗುತ್ತದೆ … ನೀವು‌ ಬದಲಾಗುತ್ತೀರ. ಅವರ ನಡೆದಂತೆ ನೀವು ನಡೆಯಲು ಸ್ಫೂರ್ತಿಯೂ ಸಿಗುತ್ತದೆ. ಅವರಿಂದ ಮಾರ್ಗದರ್ಶನ ಪಡೆಯಿರಿ. ಟಿಪ್ಸ್ ಗಳು ಸಿಗದಿದ್ದರೆ ನೀವೇ ಅವರನ್ನು ಸಾಧ್ಯವಾದರೆ ಮಾತಿಗೆಳೆದು ಹೊಸ ಹೊಸ ಟಿಪ್ಸ್ ಗಳನ್ನು ತಿಳಿದುಕೊಳ್ಳಿ.

ಪ್ರತಿದಿನ ಹೊಸ ವಿಚಾರಗಳನ್ನು ಕಲಿಯಿರಿ .. ಅದರಿಂದ ನಿಮಗೆ ಹೊಸ ದುಡಿಮೆ ಮಾರ್ಗವೂ ಸಿಗಬಹುದು … ಕಲಿಕೆಯಿಂದ ಖಂಡಿತಾ ಒಳಿತಾಗುತ್ತದೆ … ಪ್ರತಿದಿನ ಕಲಿಕೆಗೆ ಕೇವಲ 20 ನಿಮಿಷಗಳನ್ನಾದರೂ ಮೀಸಲಿಡಿ … ಆ ಸಂಕಲ್ಪ .. ಇಂದೇ .. ಈಗಲೇ ಮಾಡಿ ಬಿಡಿ … ಕಲಿಕೆ ನಿರಂತರವಾಗಿರಲಿ. ನೀವು ಹೊಸ ವಿಚಾರ ಕಲಿತಷ್ಟು ಅವಕಾಶಗಳು ಜಾಸ್ತಿ. ಹಾಗಾಗಿ ಸದಾ ಹೊಸತನ್ನು ಹುಡುಕಿ‌ .. ಹೊಸತರ ಬಗ್ಗೆ ಆಸಕ್ತಿ ಇರಲಿ.

ಹೀಗೆ ಈ ಸಣ್ಣಪುಟ್ಟ ಟಿಪ್ಸ್ ಅನುಸರಿಸಿ … ರಾತ್ರಿ ಬೆಳಗಾಗುವುದರಲ್ಲಿ ಏನೂ ಆಗಲ್ಲ .. ಕಾಯಬೇಕು..ಆ ನಿಟ್ಟಿನಲ್ಲಿ ದೃಢ ಹೆಜ್ಜೆಯೂ ಬೇಕು …

ಹಾಗೆಯೇ ಇದು ಕೇವಲ ಮಾರ್ಗದರ್ಶಿ..ಇದು ಮಾತ್ರ ಮಾರ್ಗವಲ್ಲ..ಇವು ಕೂಡ ಮಾರ್ಗ ಎಂಬುದು ನಿಮ್ಮ ಗಮನಕ್ಕಿರಲಿ … ಯಾವುದೂ ಸುಲಭವಲ್ಲ ಪ್ರಯತ್ನ ಬೇಕು.

 

Share post:

Subscribe

spot_imgspot_img

Popular

More like this
Related

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ: ನಾಗರಿಕರ ಪ್ರಶಂಸೆ

ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವುದು ನಮ್ಮ ಪುಣ್ಯ:...

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ ಸೋಂಕು

ಜಾರ್ಖಂಡ್‌ನಲ್ಲಿ ವೈದ್ಯಕೀಯ ನಿರ್ಲಕ್ಷ್ಯ — ರಕ್ತ ಪಡೆದ ಐದು ಮಕ್ಕಳಿಗೆ ಎಚ್‌ಐವಿ...

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ ತಪ್ಪದೇ ಬಿಡಿ!

ಬೆಳಿಗ್ಗೆ ಎದ್ದಾಕ್ಷಣ ಇವುಗಳನ್ನು ನೋಡಿದರೆ ಅದೃಷ್ಟ – ಆದರೆ ಈ ಕೆಲಸ...

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...