ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್, ಹೆಚ್ ವಿಶ್ವನಾಥ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆತರುತ್ತಿರುವ ವೇಳೆ ಹಲವರು ವಿರೋಧಿಸಿದ್ದರು. ಆದರೂ ಲೆಕ್ಕಿಸದೇ, ಅವರ ವಿರೋಧದ ನಡುವೆಯೂ ಜೆಡಿಎಸ್ ಗೆ ಕರೆತಂದೆ. ಜೆಡಿಎಸ್ ರಾಜ್ಯಾಧ್ಯಕ್ಷರಾಗುವಂತೆಯೂ ಮಾಡಲಾಯಿತು ಎಂದು ಹೇಳಿದರು.
ಜೆಡಿಎಸ್ ನಿಂದ ಹೆಚ್ ವಿಶ್ವನಾಥ್ ಗೆ ರಾಜಕೀಯ ಪುನರ್ ಜನ್ಮ ಸಿಕ್ಕಿತು. ಆದರೇ ಇಂತಹ ಪಕ್ಷಕ್ಕೆ ಮೋಸ ಮಾಡಿದ್ದಾರೆ. ನಾನು ಜಾತಿವಾದಿ ಎಂದು ಹೇಳುತ್ತಿದ್ದಾರೆ. ಆದರೇ ಅವರೇ ಜಾತಿ ವಾದಿ ಎಂದು ಕಿಡಿಕಾರಿದ ಸಚಿವ ಸಾರಾ ಮಹೇಶ್, ವಿಶ್ವನಾಥ್ ಗೆ ಜೆಡಿಎಸ್ ಪಕ್ಷದ ಋಣ ತೀರಿಸುವುದಿದ್ದರೇ ವಿಶ್ವಾಸಮತಕ್ಕೆ ಬರಲಿ. ನೀವು ಸಾಚಾ ಆಗಿದ್ದರೇ ಅಧಿವೇಶನಕ್ಕೆ ಬನ್ನಿ ಎಂದು ಶಾಸಕ ಹೆಚ್ ವಿಶ್ವನಾಥ್ ಗೆ ಸವಾಲ್ ಹಾಕಿದರು.