ನೂತನ ಸಚಿವರಿಗೆ ಖಾತೆ ಹಂಚಿಕೆ..ಯಾರಿಗೆ ಯಾವ ಖಾತೆ?

Date:

ನೂತನ ಏಳು ಮಂದಿ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅಧಿಕೃತ ಆದೇಶ ಹೊರಡಿಸಿದ್ದಾರೆ. ಖಾತೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು ಸಚಿವ ಜೆ.ಸಿ ಮಾಧುಸ್ವಾಮಿ ಅವರಲ್ಲಿದ್ದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆಯನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ಹೆಚ್ಚುವರಿಯಾಗಿ ನೀಡಲಾಗಿದ್ದು ಮಾಧುಸ್ವಾಮಿಗೆ ಡಾ. ಕೆ ಸುಧಾಕರ್‌ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ನೀಡಲಾಗಿದೆ.

ಅಷ್ಟೇ ಅಲ್ಲದೆ ಕೆ. ಗೋಪಾಲಯ್ಯ ಅವರ ಬಳಿ ಇದ್ದ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯನ್ನು ಉಮೇಶ್ ಕತ್ತಿಗೆ ನೀಡಲಾಗಿದೆ. ಇದಕ್ಕೆ ಬದಲಾಗಿ ಗೋಪಾಲಯ್ಯ ಅವರಿಗೆ ತೋಟಗಾರಿಕೆ ಹಾಗೂ ಸಕ್ಕರೆ ಖಾತೆಯನ್ನು ನೀಡಲಾಗಿದೆ. ಪ್ರಭುಚೌಹ್ಹಾನ್ ಅವರಲ್ಲಿ ಇದ್ದ ಹಜ್ ಮತ್ತು ವಕ್ಫ್ ಖಾತೆಯನ್ನು ಕೆ.ಸಿ ನಾರಾಯಣ ಗೌಡ ಅವರಿಗೆ ನೀಡಲಾಗಿದೆ.

ಇನ್ನು ನೂತನ ಏಳು ಮಂದಿ ಸಚಿವರಿಗೆ ನೀಡಲಾಗಿರುವ ಖಾತೆಗಳು ಹಾಗೂ ಹಾಲಿ ಸಚಿವರಿಗೆ ಬದಲಾವಣೆ ಮಾಡಿ ಹಂಚಲಾಗಿರುವ ಖಾತೆಗಳ ವಿವರ ಇಲ್ಲಿದೆ.

ಉಮೇಶ್ ಕತ್ತಿಆಹಾರ ಮತ್ತು ನಾಗರೀಕ ಪೂರೈಕೆಬಸವರಾಜ ಬೊಮ್ಮಾಯಿಗೃಹ ಹಾಗೂ ಕಾನೂನು ಮತ್ತು ಸಂಸದೀಯ ಇಲಾಖೆಜೆ.ಸಿ ಮಾಧುಸ್ವಾಮಿವೈದ್ಯಕೀಯ ಶಿಕ್ಷಣ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಸಿಸಿ ಪಾಟೀಲ್ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕಕೋಟಾ ಶ್ರೀನಿವಾಸ್ ಪೂಜಾರಿಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಇಲಾಖೆಡಾ. ಕೆ ಸುಧಾಕರ್ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಆನಂದ್ ಸಿಂಗ್ಪ್ರವಾಸೋದ್ಯಮ ಹಾಗೂ ಪರಿಸರ ಖಾತೆಸಿಪಿ ಯೋಗೇಶ್ವರ್‌ಸಣ್ಣ ನೀರಾವರಿಪ್ರಭು ಚೌಹ್ಹಾಣ್ಪಶುಸಂಗೋಪಣೆಮುರುಗೇಶ್ ನಿರಾಣಿಗಣಿ ಹಾಗೂ ಭೂವಿಜ್ಞಾನಎಸ್. ಅಂಗಾರಬಂದರು ಹಾಗೂ ಮೀನುಗಾರಿಕೆಅರವಿಂದ್ ಲಿಂಬಾವಳಿಅರಣ್ಯಆರ್‌. ಶಂಕರ್‌ಪೌರಾಡಳಿತ ಹಾಗೂ ರೇಷ್ಮೆಎಂಟಿಬಿ ನಾಗರಾಜ್ಅಬಕಾರಿಕೆ. ಗೊಪಾಲಯ್ಯತೋಟಗಾರಿಕೆ ಹಾಗೂ ಸಕ್ಕರೆಕೆ. ಸಿ ನಾರಾಯಣ ಗೌಡಯುವ ಜನ ಹಾಗೂ ಕ್ರೀಡೆ ಹಾಗೂ ಹಜ್ ಮತ್ತು ವಕ್ಫ್

 

Share post:

Subscribe

spot_imgspot_img

Popular

More like this
Related

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್ ಅಡುಗೆ...

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ !

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ ! ದೇವಿಯ ಹಿನ್ನಲೆ ಕಾಳರಾತ್ರಿ...