ಬುಧವಾರ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸುವ ಸಾಧ್ಯತೆಗಳಿವೆ.
ಬುಧವಾರ ಸಂಜೆ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ಇಂದು ಸಾಯಂಕಾಲ ಅಥವಾ ನಾಳೆ ಬೆಳಗ್ಗೆ ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಮಾಧ್ಯಮಗಳಲ್ಲಿ ಹಲವರ ಹೆಸರು ಬರುತ್ತಿರೋದನ್ನ ಗಮನಿಸಿದ್ದೇನೆ. ನಾನೇ ಸಂಜೆ ಅವರ ಹೆಸರು ಹೇಳುತ್ತೇನೆ. ಸಂಪುಟ ವಿಸ್ತರಣೆನಾ ಅಥವ ಪುನರ್ ರಚನೆ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಸಿಎಂ ನಾಳೆ ಎಲ್ಲವೂ ಗೊತ್ತಾಗಲಿದೆ ಎಂದು ತಿಳಿಸಿದರು.
ಸಿಎಂ ದೆಹಲಿ ಪ್ರವಾಸದಿಂದ ಬಂದ ಬಳಿಕ ಏಳು ಸಚಿವ ಸ್ಥಾನಕ್ಕಾಗಿ ಸುಮಾರು 20ಕ್ಕೂ ಅಧಿಕ ಶಾಸಕರು ರೇಸ್ ನಲ್ಲಿದ್ದಾರೆ. ಮೂವರು ವಲಸಿಗರು ಮತ್ತು ಮೂಲ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಎಂಎಲ್‍ಸಿ ಸಿ.ಪಿ.ಯೋಗೇಶ್ವರ್ ಮತ್ತು ಬಿಎಸ್‍ಪಿ ಉಚ್ಛಾಟಿತ ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಹೆಸರು ಸಂಪುಟ ಸೇರ್ಪಡೆಯಾಗುವ ಪಟ್ಟಿಯಲ್ಲಿ ಮುನ್ನಲೆಗೆ ಬಂದಿದೆ.
: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಸೋಮವಾರ ಮುದ್ದಾದ ಹೆಣ್ಣು ಮಗುವಿನ ಜನ್ಮನೀಡಿದ್ದಾರೆ. ಅಂದಹಾಗೆ ಕೆಲ ತಿಂಗಳ ಹಿಂದೆ ವಿರುಷ್ಕಾ ಜೋಡಿ ತಮ್ಮ ಕುಟುಂಬಕ್ಕೆ ನೂತನ ಸದಸ್ಯರ ಆಗಮನ ಜನವರಿಯಲ್ಲಿ ಆಗಲಿದೆ ಎಂಬ ಸುದ್ದಿಯನ್ನು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದರು.
ಇದರ ಬೆನ್ನಲ್ಲೇ ಕೋಟ್ಯಂತರ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ವೇದಿಕೆಗಳ ಮೂಲಕ ಶುಭ ಹಾರೈಸಿದ್ದರು ಕೂಡ. ಅಷ್ಟೇ ಅಲ್ಲದೆ ಬೆಂಗಳೂರಿನ ಪ್ರಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ ಅವರು ವಿರುಷ್ಕಾ ಜೋಡಿಗೆ ಹೆಣ್ಣು ಮಗು ಜನಿಸಲಿದೆ ಎಂದು ಕರಾರುವಾಕ್ ಭವಿಷ್ಯ ನುಡಿದಿದ್ದರು.
ಇಂದು ಪಂಡಿತ್ ಜಗನ್ನಾಥರು ಹೇಳಿದ್ದ ಭವಿಷ್ಯ ಅಕ್ಷರಶಃ ನಿಜವಾಗಿದೆ. ಕೊಹ್ಲಿ ಕುಟುಂಬಕ್ಕೆ ಮುದ್ದಾದ ಹೆಣ್ಣು ಮಗುವಿನ ಸೇರ್ಪಡೆಯಾಗಿದೆ. ಅಂದಹಾಗೆ ಕಳೆದ 25 ವರ್ಷಗಳಿಂದ ಜೋತಿಷ್ಯ ಶಾಸ್ತ್ರದಲ್ಲಿ ಪಳಗಿರುವ ಜಗನ್ನಾತ್ ಹಲವಾರು ಮಂದಿಗೆ ಮಾರ್ಗದರ್ಶನ ನೀಡಿದ್ದಾರೆ.
“ಹುಟ್ಟುವ ಮಗು ಹೆಣ್ಣಾಗಲಿ ಅಥವಾ ಗಂಡಾಗಲಿ, ಇಬ್ಬರಲ್ಲೂ ಸಮಾನ ಸಾಮರ್ಥ್ಯ ಇರಲಿದೆ. ಇಂದು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಪ್ರತಿಯೊಂದರಲ್ಲೂ ಮುಂದಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮುಖ ಗಮನಸಿ ಲೆಕ್ಕಾಚಾರ ಮಾಡಿ ಹೇಳುವುದಾದರೆ ಇವರಿಗೆ ಹೆಣ್ಣು ಮಗು ಆಗುವ ಸಾಧ್ಯತೆ ಹೆಚ್ಚಿದೆ,” ಎಂದು ಗುರುಜಿ ಹೇಳಿದ್ದನ್ನು ಏಷ್ಯಾನೆಟ್ ಸುದ್ದಿವಾಹಿನಿ ವರದಿ ಮಾಡಿತ್ತು.
ಕೊಹ್ಲಿ, ತಂದೆಯಾದ ಸುದ್ದಿಯನ್ನು ಸೋಷಿಯಲ್ ಮೀಡಿಯಾ ವೇದಿಕೆಗಳ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್, ಟ್ವಿಟರ್ ಮತ್ತು ಫೇಸ್‌ಬುಲ್‌ನಲ್ಲಿ ಏಕಕಾಲದಲ್ಲಿ ಅಪ್‌ಡೇಟ್ ನೀಡಿದ ಕಿಂಗ್ ಕೊಹ್ಲಿ, ವಿಶೇಷ ಸಂದೇಶವೊಂದನ್ನೂ ಬರೆದಿದ್ದಾರೆ.
“ಇಂದು ಮಧ್ಯಾನ ಮುದ್ದಾದ ಹೆಣ್ಣು ಮಗು ಜನಿಸಿದೆ ಎಂಬ ಸುದ್ದಿ ನಿಮ್ಮೊಟ್ಟಿಗೆ ಹಂಚಿಕೊಳ್ಳಲು ರೋಮಾಂಚನವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಮತ್ತು ಪ್ರಾರ್ಥನೆಗೆ ಧನ್ಯವಾದಗಳು. ತಾಯಿ ಅನುಷ್ಕಾ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ. ಇಬ್ಬರೂ ಕೂಡ ನಮ್ಮ ಜೀವನದ ಮುಂದಿನ ಘಟ್ಟ ಆರಂಭಿಸಲು ಉತ್ಸುಕರಾಗಿದ್ದೇವೆ. ನಮ್ಮ ಖಾಸಗೀತನವನ್ನು ನೀವು ಗೌರವಿಸುತ್ತೀರ ಎಂಬ ಆಶಾಭಾವನೆಯಿದೆ,” ಎಂದು ವಿರಾಟ್ ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾ ಗೋಡೆಗಳ ಮೇಲೆ ಬರೆದಿದ್ದಾರೆ.