ನೂರು ಮಿಲಿಯನ್ ಗಡಿ ದಾಟಿದ ‘ಖರಾಬು’ ಸಾಂಗ್.. ತೆಲುಗಿನಲ್ಲೂ ಹಾಡು ಬಿಡುಗಡೆ ಮಾಡಲು ಮುಂದಾದ ‘ಪೊಗರು’ ಟೀಂ..

Date:

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಹೆಚ್ಚು ನಿರೀಕ್ಷೆ ಹುಟ್ಟುಹಾಕಿರೋ ಚಿತ್ರಗಳು, ಸಾಲು ಸಾಲಾಗಿ ಬಿಡುಗಡೆಯಾಗಲು ಸಜ್ಜಾಗಿವೆ. ಈ ಪೈಕಿ ಆ್ಯಕ್ಷನ್ ಪ್ರಿನ್ಸ್‌ ಧೃವಾ ಸರ್ಜಾ ಅಭಿನಯದ ಪೊಗರು ಸಿನಿಮಾ ಕೂಡಾ ಒಂದು.

ಈಗಾಗಲೇ ಡೈಲಾಗ್ ಟ್ರೇಲರ್ ಹಾಗೂ ಹಾಡಿನ ಮೂಲಕ ಕಮಾಲ್ ಮಾಡುತ್ತಿರುವ ಪೊಗರು ಸಿನಿಮಾ ತಂಡದಿಂದ ಅಭಿಮಾನಿಗಳಿಗೆ ಸದ್ಯ ಮತ್ತೊಂದು ಸಿಹಿ ಸುದ್ದಿ ಬಿಡುಗಡೆಯಾಗಿದೆ. ಅದೇನೆಂದರೆ ಖರಾಬು ಹಾಡು ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ.

ಹೌದು, ಧೃವಾ ಸರ್ಜಾ ಅಭಿನಯಿಸಿರುವ ನಂದ ಕಿಶೋರ್ ನಿರ್ದೇಶನದ ‘ಪೊಗರು’ ಚಿತ್ರದ ‘ಖರಾಬು’ ಹಾಡಿಗೆ ಈಗಾಗಲೇ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಈ ಹಾಡು ೧೦೦ ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರದ ಹಾಡೊಂದಕ್ಕೆ ಯೂಟ್ಯೂಬ್‌ನಲ್ಲಿ ಸಿಕ್ಕ ಬಹುದೊಡ್ಡ ಹಿಟ್ ಇದಾಗಿದೆ. ಇದರಿಂದ ಸಂತಸಗೊಂಡಿರುವ ಪೊಗರು ಸಿನಿಮಾ ತಂಡ ಮತ್ತೊಂದು ಪ್ಲಾನ್ ಮಾಡಿದೆ.

ಪೊಗರು ಸಿನಿಮಾ ಇನ್ನೇನು ತೆರೆಗೆ ಬರಲು ರೆಡಿಯಾಗಿದ್ದು, ಕೊರೊನಾ ಮಹಾಮಾರಿ ಬಾರದೇ ಇದ್ದಿದ್ದರೆ,ಇಷ್ಟೋತ್ತಿಗಾಗಲೇ ಸಿನಿಮಾ ತೆರೆಕಂಡು ಬಹುದಿನವೇ ಕಳೆದಿರುತ್ತಿತ್ತು. ಆದ್ರೆ ಈ ಕೊರೊನಾ ದಾಳಿಯಿಂದಾಗಿ ಚಿತ್ರಮಂದಿರಗಳು ಸಹ ಕ್ಲೋಸ್ ಆಗಿದ್ದವು. ಇದೇ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಖರಾಬು ಸಾಂಗ್ ದಿನದಿಂದ ದಿನಕ್ಕೆ ಸೆನ್ಶೇಷನ್ ಕ್ರಿಯೇಟ್ ಮಾಡಿತ್ತು.

ಹಾಡು ಬಿಡುಗಡೆಗೊಂಡು ದಿನದಿಂದ ದಿನಕ್ಕೆ‌ ಮಿಲಿಯನ್, ಹತ್ತು ಮಿಲಿಯನ್, ೫೦ ಮಿಲಿಯನ್ ಹೀಗೆ ವೀವ್ಸ್ ಪಡೆದು ಇದೀಗ ನೂರು ಮಿಲಿಯನ್‌ನತ್ತ ಪಯಣ ಸಾಗಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಇದೀಗ ತೆಲುಗು ಭಾಷೆಯಲ್ಲಿ ಹಾಡನ್ನು ಬಿಡುಗಡೆ ಮಾಡಲು‌ ಮುಂದಾಗಿದೆ.

 https://youtu.be/Ysf4QRrcLGM

ಅಷ್ಟೇ ಅಲ್ಲದೆ ತೆಲುಗಿನಲ್ಲಿ ಖರಾಬು ಸಾಂಗ್ ಕೂಡಾ ಇದೇ ಆಗಸ್ಟ್ 6ಕ್ಕೆ ರಿಲೀಸ್ ಆಗಲಿದ್ದು, ಸಖತ್ ಸೌಂಡ್ ಮಾಡುತ್ತಿದೆ. ಪೊಗರು ಸಿನಿಮಾದ ಖರಾಬು ಹಾಡು ಬಿಡುಗಡೆಯಾಗುತ್ತಿರುವ ಬಗ್ಗೆ ತೆಲುಗು ನಟ ಸಂಪತ್‌ರಾಜ್ ಮಾತನಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.

ಅಂದಹಾಗೆ ಧೃವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ನಂದಕಿಶೋರ್ ಆ್ಯಕ್ಸನ್‌ಕಟ್ ಹೇಳಿದ್ದಾರೆ. ಧೃವ ಸರ್ಜಾ ಅಭಿನಯದ ನಾಲ್ಕನೇ ಸಿನಿಮಾ ಇದಾಗಿದ್ದು, ಮೊದಲು ಅಭಿನಯಿಸಿದ ಮೂರು ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಹಿಟ್ ಆಗಿವೆ. ಚಂದನ್ ಶೆಟ್ಟಿ ಸಂಗೀತ ನೀಡಿರುವ ಈ ಹಾಡಿನ ಯಶಸ್ಸು, ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಮೂಡಿಸಿದೆ.

ಹಾಗೆಯೇ ಈಗ ಕೊರೊನಾ ವೈರಸ್ ಭೀತಿ ಕಡಿಮೆಯಾಗದೇ ಇರುವುದರಿಂದ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಪೂರ್ಣಗೊಳಿಸಿ ಸಿನಿಮಾ ತೆರೆಗೆ ತರುವುದು ತಡವಾಗುತ್ತದೆ. ಹಾಗಾಗಿ ಅಭಿಮಾನಿಗಳ ಬಯಕೆ ತಣಿಸಲು ಚಿತ್ರತಂಡ ಮತ್ತೊಂದು ಉಪಾಯ ಮಾಡಿದೆ.

ಧೃವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಹೇಗಿದೆ ಅನ್ನೋದು ಸಿನಿ ಅಭಿಮಾನಿಗಳ ಪಾಲಿಗೆ ಕ್ಯೂರಿಯಾಸಿಟಿಯನ್ನ ಉಂಟು ಮಾಡಿದೆ. ಬಿಕೆ.ಗಂಗಾಧರ್ ನಿರ್ಮಾಣದ ಸಿನಿಮಾದಲ್ಲಿ ದೃವ ಸರ್ಜಾ ರಶ್ಮಿಕಾ ಮಂದಣ್ಣ, ಚಿಕ್ಕಣ್ಣ, ಕುರಿ ಪ್ರತಾಪ್, ರವಿ ಶಂಕರ್ ಮುಂತಾದವರು ಅಭಿನಯಿಸಿದ್ದಾರೆ. ಇನ್ನು ಸಿನಿಮಾ ಯಾವಾಗ ತೆರೆಗೆ ಬರುತ್ತೆ ಅಂತಾ ಕಾದು ನೋಡಬೇಕು.

 

 

 

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...