ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಪರದಾಡುತ್ತಿರುವ ಜನರ ಕಷ್ಟಕ್ಕೆ ಸ್ಪಂದಿಸಲು ರಾಜಕಾರಣಿಗಳು ಹಾಗೂ ಸಿನಿಮಾ ಕ್ಷೇತ್ರದಿಂದಲೂ ಎಲ್ಲರೂ ಒಗ್ಗಟ್ಟಾಗಿ ನೆರೆ ಸಂತ್ರಸ್ತರ ನೆರವಿಗೆ ಮುಂದೆ ಬರುತ್ತಿದ್ದರೆ ಹಾಗೆಯೇ ರಾಕಿಂಗ್ ಸ್ಟಾರ್ ಯಶ್ ಅವರು ಕೂಡಾ ತಮ್ಮ ಅಭಿಮಾನಿಗಳಿಗೂ ಹಾಗೂ ಸ್ವತಃ ಅವರೂ ಕೂಡ ನೆರೆ ಸಂತ್ರಸ್ತರಿಗೆ ಸ್ಪಂದಿಸಿದ್ದಾರೆ .
ತಮ್ಮ ಯಶೋ ಮಾರ್ಗವನ್ನು ಅನುಸರಿಸಿ ಪ್ರವಾಹದಲ್ಲಿ ಸಿಲುಕಿದ್ದು ಎಪ್ಪತ್ತು ಅಂಧ ಮಕ್ಕಳನ್ನು ರಕ್ಷಿಸಿ ಅವರಿಗೆ ಆಶ್ರಯ ವಸತಿಯನ್ನು ಕಲ್ಪಿಸಿಕೊಟ್ಟಿದ್ದಾರೆ . ಇದೇ ರೀತಿ ಎಲ್ಲಾ ನಟ ನಟಿಯರು ರಾಜಕಾರಣಿಗಳು ಸ್ಪಂದಿಸಬೇಕು ಕರ್ನಾಟಕದಾದ್ಯಂತ ಮಳೆಯ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ . ಅದರಲ್ಲೂ ಉತ್ತರ ಕರ್ನಾಟಕ ಮುಳುಗಿ ಹೋಗಿದೆ ಎಲ್ಲರೂ ಸೇರಿ ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸೋಣ .