ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇವಲ ಪರದೆಯ ಮೇಲಷ್ಟೆ ಅಲ್ಲ ನಿಜಜೀವನದಲ್ಲಿಯೂ ಸಹ ಹೀರೋ. ಕಷ್ಟ ಎಂದು ಹೇಳಿಕೊಂಡು ಬಂದ ಅಭಿಮಾನಿಗಳಿಗೆ ಯಾವಾಗಲೂ ಸಹ ಸಹಾಯ ಹಸ್ತವನ್ನು ಚಾಚುವ ಪುನೀತ್ ಅವರು ಈ ಹಿಂದೆ ಕೊಡಗಿನಲ್ಲಿ ಪ್ರವಾಹ ಆದಾಗಲೂ ಸಹ ತಮ್ಮ ಕೈಲಾದಷ್ಟು ಹಣ ಸಹಾಯ ಮಾಡಿದ್ದರು ಮತ್ತು ಬೇಕಾದ ಸಾಮಗ್ರಿಗಳನ್ನು ಕೊಟ್ಟಿದ್ದರು.
ಇನ್ನು ಕಳೆದ ವರ್ಷದಂತೆ ಈ ವರ್ಷವೂ ಸಹ ಕರ್ನಾಟಕ ರಾಜ್ಯಕ್ಕೆ ಪ್ರವಾಹ ದೊಡ್ಡ ಮಟ್ಟದಲ್ಲಿಯೇ ಹೊಡೆತವನ್ನು ನೀಡಿದ್ದು, ಅದರಲ್ಲಿಯೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಪ್ರವಾಹದ ಭೀಕರತೆ ಹೆಚ್ಚಾಗಿದೆ. ಅತ್ಯಂತ ದೊಡ್ಡ ಮಟ್ಟದಲ್ಲಿ ಪ್ರವಾಹ ಉಂಟಾದ ಕಾರಣ ಅನೇಕ ಮಂದಿ ತಮ್ಮ ಮನೆ ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಹೀಗೆ ಪ್ರವಾಹದಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡು ತಿನ್ನಲು ಗತಿಯಿಲ್ಲದೇ ನಿರಾಶ್ರಿತರಾದ ಉತ್ತರ ಕರ್ನಾಟಕದ ಜನರಿಗೆ ಹಲವಾರು ಮಂದಿ ಸಹಾಯಹಸ್ತವನ್ನು ಚಾಚಿದ್ದು , ಚಿತ್ರರಂಗದ ನಟ ನಟಿಯರು ತಮ್ಮ ಕೈಲಾದಷ್ಟು ಸಹಾಯಗಳನ್ನು ಮಾಡಿದರು. ಅಷ್ಟೇ ಅಲ್ಲದೆ ಕನ್ನಡದ ಸ್ಟಾರ್ ನಟರುಗಳ ಅಭಿಮಾನಿಗಳು ಸಹ ತಮ್ಮ ಕೈಲಾದ ಸಾಮಗ್ರಿಗಳನ್ನು ನೆರೆ ಸಂತ್ರಸ್ತರಿಗೆ ಕಳುಹಿಸಿ ಕೊಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇನ್ನು ಈ ಒಂದು ವಿಷಯದ ಕುರಿತಾಗಿ ಪುನೀತ್ ಅವರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಬರೋಬ್ಬರಿ 25 ಕೋಟಿ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಯನ್ನು ನೋಡಿದ ಹಲವಾರು ಮಂದಿ ಇದು ನಿಜ ಎಂದು ನಂಬಿದರೆ ಮತ್ತಷ್ಟು ಮಂದಿ ಇದು ಫೇಕ್ ಎಂದು ಮಾತನಾಡಿಕೊಳ್ಳುತ್ತಿದ್ದರು. ಇನ್ನು ಈ ವಿಷಯದ ಕುರಿತಾಗಿ ಸ್ವತಃ ಪುನೀತ್ ರಾಜ್ಕುಮಾರ್ ಅವರೇ ಇದೀಗ ಪ್ರತಿಕ್ರಿಯೆಯನ್ನು ನೀಡಿದ್ದು ಆ ಒಂದು ಸುದ್ದಿ ಸುಳ್ಳು ಅಷ್ಟು ಹಣ ನಾನು ನೀಡಿಲ್ಲ ಆದರೆ ನನ್ನ ಕೈಲಾದಷ್ಟು ಸಹಾಯವನ್ನು ನಾನು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಸಿಎಂ ಅವರ ಕಚೇರಿಗೆ ಭೇಟಿ ನೀಡಿದ ಪುನೀತ್ ಅವರು ರಿಲೀಫ್ ಫಂಡ್ ಗೆ 5 ಲಕ್ಷ ಹಣ ನೀಡುವುದರ ಮೂಲಕ ಉತ್ತರ ಕರ್ನಾಟಕದ ನಿರಾಶ್ರಿತರಿಗೆ ಸಹಾಯ ಹಸ್ತ ಚಾಚಿದ್ದಾರೆ.