ಬೆಳಿಗ್ಗೆಯಿಂದ ರಣ ಬಿಸಿಲಿನಿಂದ ಬಳಲಿದ ಬೆಂಗಳೂರಿಗೆ ಸಂಜೆ ವೇಳೆಗೆ ಭಾರಿ ಮಳೆ ಆವರಿಸಿಕೊಂಡುಬಿಟ್ಟಿದೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಸಂಜೆ ಆಲಿಕಲ್ಲು ಸಹಿತ ಧಾರಾಕಾರವಾದ ಮಳೆಯಾಗಿದೆ.
ಶಾಂತಿನಗರ, ಕೋರಮಂಗಲ, ರಿಚ್ಮಂಡ್ ಸರ್ಕಲ್, ಲಾಲ್ಬಾಗ್, ಚಾಮರಾಜಪೇಟೆ, ಬನಶಂಕರಿ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ, ದಿಢೀರ್ ಸುರಿದ ಮಳೆಯಿಂದಾಗಿ ಬೆಂಗಳೂರಿನ ನಾಗರಿಕರು ಪರದಾಡುವಂತಾಗದ್ದು ಹಲವು ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ, ಇನ್ನು ಹಲವು ಕಡೆ ಮರಗಳು ನೆಲಕ್ಕೆ ಉರುಳಿದ್ದು ವಾಹನಗಳು ಜಖಂ ಆಗಿವೆ.