ನೇಹಾ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ಭೇಟಿ: ಮುಂದುವರಿದ ತನಿಖೆ

Date:

ಹುಬ್ಳಳ್ಳಿ: ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು ಇಂದು ಬೆಳಗ್ಗೆ ನಿರಂಜನ ಹಿರೇಮಠ ಅವರ ಮನೆಗೆ ಆಗಮಿಸಿದರು. ನಿರಂಜನ್ ಹಿರೇಮಠ ಮತ್ತು ಗೀತಾ ಹಿರೇಮಠ ಅವರನ್ನು ಅಧಿಕಾರಿಗಳು ಪ್ರಶ್ನಿಸಲಿರುವುದನ್ನು ನಿರೀಕ್ಷಿಸಲಾಗಿತ್ತು. ಏನೆಲ್ಲ ಪ್ರಶ್ನೆಗಳನ್ನು ಸಿಐಡಿ ಕೇಳಿದರು ಅನ್ನೋದು ಮಾಧ್ಯಮಗಳಿಗೆ ಗೊತ್ತಾಗುವ ಸಾಧ್ಯತೆ ಇಲ್ಲ. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ, ವಿಚಾರಣೆ ಮಾಧ್ಯಮಗಳ ಸಮ್ಮುಖದಲ್ಲಿ ನಡೆಯಲ್ಲ ಅದು ಸಾಧುವೂ ಅಲ್ಲ. ಆದರೆ, ಅಧಿಕಾರಿಗಳು ಹೋದ ಮೇಲೆ ನಡೆದ ವಿಚಾರಣೆಯ ಬಗ್ಗೆ ನಿರಂಜನ್ ಅವರು ಮಾಧ್ಯಮಗಳಿಗೆ ತಿಳಿಸಬಹುದು.
ನಾವು ವರದಿ ಮಾಡಿರುವ ಹಾಗೆ, ನಿನ್ನೆ ಹುಬ್ಬಳ್ಳಿಯ ಜೈಲಲ್ಲಿದ್ದ ಫಯಾಜ್ ನನ್ನು ನಿನ್ನೆ ತಮ್ಮ ವಶಕ್ಕೆ ಪಡೆದಿರುವ ಅಧಿಕಾರಿಗಳು, ಅವನ ವೈದ್ಯಕೀಯ ಪರೀಕ್ಷೆ ನಡೆಸಿ ಕೊಲೆ ನಡೆದ ಸ್ಥಳಕ್ಕೆ ಮಹಜರ್ ಗಾಗಿ ಕರೆತಂದಿದ್ದರು. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದ ನಿರಂಜನ್ ಹಿರೇಮಠ ಮನೆಗೆ ಭೇಟಿ ನೀಡಲಿದ್ದಾರೆ.

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...