ನ್ಯೂಯಾರ್ಕ್ ನಲ್ಲಿ ಇಂಡಿಯನ್ ರೆಸ್ಟೋರೆಂಟ್ ಶುರುಮಾಡಿದ ಪ್ರಿಯಾಂಕ!

Date:

ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನಲ್ಲಿ ಜನಪ್ರಿಯತೆ ಪಡೆದುಕೊಂಡ ಮೇಲೆ ಹಾಲಿವುಡ್‌ನಲ್ಲೂ ಹವಾ ಸೃಷ್ಟಿಸಿದರು. ನಂತರ ಅಲ್ಲಿನವರೇ ಆದ ಗಾಯಕ ನಿಕ್ ಜೋನಸ್ ಜೊತೆ ಸಪ್ತಪದಿಯನ್ನೂ ತುಳಿದರು. ಇದೀಗ ಪಿಗ್ಗಿ ವಾಸ್ತವ್ಯ ಅಮೆರಿಕಕ್ಕೆ ಶಿಫ್ಟ್‌ ಆಗಿದೆ. ಜೊತೆಗೆ ಹಾಲಿವುಡ್‌ ಸಿನಿಮಾಗಳಲ್ಲೇ ಜಾಸ್ತಿ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಹೊಸದೊಂದು ಬ್ಯುಸಿನೆಸ್‌ಗೂ ಈ ಬೆಡಗಿ ಕೈ ಹಾಕಿದ್ದಾರೆ. ಅದು ಕೂಡ ಅಮೆರಿಕದಲ್ಲೇ!

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಇಂಡಿಯನ್ ರೆಸ್ಟೋರೆಂಟ್‌ವೊಂದನ್ನು ಪ್ರಿಯಾಂಕಾ ಚೋಪ್ರಾ ಶುರು ಮಾಡಿದ್ದಾರೆ. ಅದಕ್ಕೆ ಅವರು ಸೋನ ಎಂದು ಹೆಸರು ಇಟ್ಟಿದ್ದಾರೆ. ಸೋನ ಎಂಬುದಕ್ಕೆ ಬಂಗಾರ ಎಂಬ ಅರ್ಥವೂ ಇದೆ. ಭಾರತೀಯ ಸಂಪ್ರದಾಯದಂತೆ ಈ ಹಿಂದೆಯೇ ರೆಸ್ಟೋರೆಂಟ್‌ಗೆ ಪೂಜೆಯನ್ನು ಸಲ್ಲಿಸಿದ್ದ ಪ್ರಿಯಾಂಕಾ, ಅದರ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸೋನ ಆರಂಭಕ್ಕೆ ಸಕಲ ಸಿದ್ಧತೆ ಆಗಿದ್ದು, ಇದೇ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.

‘ನ್ಯೂಯಾರ್ಕ್‌ನಲ್ಲಿ ಆರಂಭವಾಗಲು ಸಜ್ಜಾಗಿರುವ ಸೋನವನ್ನು ಪರಿಚಯಿಸಲು ನಾನು ಥ್ರಿಲ್‌ ಆಗಿದ್ದೇನೆ. ನನ್ನ ಭಾರತೀಯ ಆಹಾರ ಪ್ರೀತಿಯನ್ನು ಇಲ್ಲಿ ತೋರಿಸಲಿದ್ದೇನೆ. ಇಲ್ಲಿ ಭಾರತೀಯ ಆಹಾರದ ಪರಿಚಯವಾಗಲಿದೆ. ಸೋನ ಇದೇ ತಿಂಗಳ ಕೊನೆಯಲ್ಲಿ ಕೆಲಸವನ್ನು ಆರಂಭಿಸಲಿದೆ. ನಿಮ್ಮೆಲ್ಲರನ್ನು ಅಲ್ಲಿ ನೋಡುವುದಕ್ಕೆ ನಾನು ಕಾತರದಿಂದ ಕಾದಿದ್ದೇನೆ’ ಎಂದು ಹೇಳಿದ್ದಾರೆ ಪ್ರಿಯಾಂಕಾ. ಈ ರೆಸ್ಟೋರೆಂಟ್‌ನಲ್ಲಿ ಹರಿ ನಾಯಕ್ ಎಂಬುವವರು ಚೆಫ್‌ ಆಗಿ ಕೆಲಸ ಮಾಡಲಿದ್ದಾರೆ. ಇವರು ಅತ್ಯುತ್ತಮವಾದ, ರುಚಿಕರವಾದ ಖಾದ್ಯಗಳನ್ನು ತಯಾರಿಸುತ್ತಾರೆ ಎಂದು ಭರವಸೆ ನೀಡುತ್ತಾರೆ ಪ್ರಿಯಾಂಕಾ.

ಇನ್ನು, ಈ ಹೊಸ ಬ್ಯುಸಿನೆಸ್‌ಗೆ ಅವರಿಗೆ ಮನೀಶ್ ಗೋಯಲ್, ಡೇವಿಡ್ ರಾಬಿನ್ ಎಂಬುವವರು ಸಾಥ್ ನೀಡಿದ್ದಾರೆ. ಇದರ ವಿನ್ಯಾಸವನ್ನು ಮೆಲಿಸ್ಸಾ ಬೋವರ್ಸ್‌ ಮತ್ತು ಅವರ ತಂಡ ಮಾಡಿದೆ. ಅಂದಹಾಗೆ, 2019ರ ಸೆಪ್ಟೆಂಬರ್‌ನಲ್ಲಿ ಈ ರೆಸ್ಟೋರೆಂಟ್ ಆರಂಭಕ್ಕೆ ಚಾಲನೆ ನೀಡಿದ್ದರು ಪಿಗ್ಗಿ. ಇದೀಗ ಸೋನ ಸೇವೆಗೆ ಸಿದ್ಧವಾಗಿದೆ. ಇನ್ನು, ಸಿನಿಮಾಗಳ ವಿಚಾರಕ್ಕೆ ಬಂದರೆ, ಎರಡು ಹಾಲಿವುಡ್‌ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಟೆಕ್ಸ್ಟ್ ಫಾರ್ ಯೂ, ಮ್ಯಾಟ್ರಿಕ್ಸ್ 4 ಸಿನಿಮಾಗಳಲ್ಲಿ ನಟಿಸಿದ್ದು, ತೆರೆಕಾಣಬೇಕಿದೆ.

 

Share post:

Subscribe

spot_imgspot_img

Popular

More like this
Related

2ನೇ ಬೆಳೆಗೆ ನೀರಿಲ್ಲದಿದ್ದರೆ ಎಕರೆಗೆ 50 ಸಾವಿರ ರೂ.ಪರಿಹಾರ ಕೊಡಿ: ನಿಖಿಲ್ ಕುಮಾರಸ್ವಾಮಿ ಆಗ್ರಹ

2ನೇ ಬೆಳೆಗೆ ನೀರಿಲ್ಲದಿದ್ದರೆ ಎಕರೆಗೆ 50 ಸಾವಿರ ರೂ.ಪರಿಹಾರ ಕೊಡಿ: ನಿಖಿಲ್...

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹಾಡಹಗಲೇ ಕೋಟಿ ಕೋಟಿ ದರೋಡೆ!

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಹಾಡಹಗಲೇ ಕೋಟಿ ಕೋಟಿ ದರೋಡೆ! ಬೆಂಗಳೂರು:  ಸಿಲಿಕಾನ್ ಸಿಟಿ...

Mantri Mall: ಮತ್ತೆ ಮಲ್ಲೇಶ್ವರಂ ಮಂತ್ರಿ ಮಾಲ್ʼ​ಗೆ ಬಿತ್ತು ಬೀಗ!

Mantri Mall: ಮತ್ತೆ ಮಲ್ಲೇಶ್ವರಂ ಮಂತ್ರಿ ಮಾಲ್ʼ​ಗೆ ಬಿತ್ತು ಬೀಗ! ಬೆಂಗಳೂರು: ಕೋಟಿ...

ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ: ವಿಜಯೇಂದ್ರ

ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ: ವಿಜಯೇಂದ್ರ ದಕ್ಷಿಣ ಕನ್ನಡ:...