ನ್ಯೂ ಇಯರ್ ಗೆ ಪವರ್ ಸ್ಟಾರ್ ಗಿಫ್ಟ್..!!
ನಾಳೆ ರಾತ್ರಿ ಹೊಸ ವರ್ಷವನ್ನ ಆಗಮನ ಮಾಡಲು ಎಲ್ಲರು ಸಿದ್ದವಾಗಿದ್ದಾರೆ.. ಪಬ್ ಗಳಲ್ಲಿ ಗಾನಬಜಾನ ಜೋರಾಗೆ ಇರುತ್ತೆ.. ಪ್ರತಿವರ್ಷದ ಈ ದಿನದಂದು ಕಿಕ್ ಕೊಡುವ ಹಾಡುಗಳ ನಡುವೆ ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನ ಬರಮಾಡಿಕೊಳ್ಳುವುದು ಕಾಮನ್..
ಹೀಗಾಗೆ ನಟಸಾರ್ವಭೌಮ ಚಿತ್ರತಂಡ ಅಭಿಮಾನಿಗಳಿಗೆ ಸಖತ್ ಗಿಫ್ಟ್ ನೀಡಿದೆ.. ವರ್ಷದ ಕೊನೆಯಲ್ಲಿ ಪವರ್ ಸ್ಟಾರ್ ತಮ್ಮ ಅಭಿಮಾನಿಗಳ ರಂಜನೆಗಾಗಿ ಓಪನ್ ದಿ ಬಾಟಲ್ ಹಾಡಿನ ಲಿರಿಕಲ್ ವಿಡಿಯೋವನ್ನ ಬಿಡುಗಡೆ ಮಾಡಿದೆ…
ಯೋಗರಾಜ್ ಭಟ್ ಕ್ಯಾಚಿ ಲಿರಿಕ್ಸ್ ಬರೆದಿದ್ದು, ವಿಜಯ್ ಪ್ರಕಾಶ್ ವಾಯ್ಸ್ ನಲ್ಲಿ ಹಾಡು ಮೋಡಿ ಮಾಡ್ತಿದೆ.. ಹಾಡಿನಲ್ಲಿ ಮೇಕಿಂಗ್ ಸಹ ಸೇರಿದ್ದು, ಪವರ್ ಫುಲ್ ಸ್ಟೆಪ್ ಹಾಕಿದ್ದಾರೆ ಅಪ್ಪು ಅನ್ನೋದು ಎದ್ದು ಕಾಣ್ತಿದೆ.. ಡಿ ಇಮಾನ್ ಮ್ಯೂಸಿಕ್ ನೀಡಿದ್ದು, ಮುಂದಿನ ತಿಂಗಳ ಕೊನೆ ವಾರ ನಟಸಾರ್ವಭೌಮ ಚಿತ್ರ ತೆರೆಗೆ ಬರಲಿದೆ..