ಬೆಂಗಳೂರು: ಆಂಧ್ರದಲ್ಲಿ, ತಮಿಳುನಾಡಿನಲ್ಲಿ ದಕ್ಷಿಣ ಭಾರತದಲ್ಲಿ ಪಂಚೆ ಹಾಕ್ತಾರೆ. ಪಂಚೆ ಉಡೋದನ್ನು ಗೌರವಿಸಬೇಕು. ನಮ್ಮೂರಲ್ಲೇ ಇದನ್ನು ಗೌರವಿಸದೆ ಹೋದ್ರೆ ಅದು ಅಪಮಾನವಾಗುತ್ತೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು. ಜಿ ಟಿ ಮಾಲ್ಗೆ ರೈತರನ್ನು ಬಿಡದ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ಇದನ್ನು ಕಲೋನಿಯಲ್ ಮೈಂಡ್ಸೆಟ್ ಅಂತಾರೆ.
ನಾವು ಇಲ್ಲಿ ಏನೆ ಉಡುಪು ಹಾಕಿದ್ರು ಗೌರವಿಸಬೇಕು. ಕರ್ನಾಟಕದಲ್ಲಿ ಪಂಚೆ ಹಾಕುವುದು ನಮ್ಮ ಉಡುಪು. ಆಂಧ್ರದಲ್ಲಿ, ತಮಿಳುನಾಡಿನಲ್ಲಿ ದಕ್ಷಿಣ ಭಾರತದಲ್ಲಿ ಪಂಚೆ ಹಾಕ್ತಾರೆ. ಪಂಚೆ ಉಡೋದನ್ನು ಗೌರವಿಸಬೇಕು. ನಮ್ಮೂರಲ್ಲೇ ಇದನ್ನು ಗೌರವಿಸದೆ ಹೋದ್ರೆ ಅದು ಅಪಮಾನವಾಗುತ್ತೆ. ಬೆಂಗಳೂರಿನ ಕೆಲವು ಕ್ಲಬ್ಗಳಲ್ಲಿ ಇಂತ ಘಟನೆಗಳು ನಡೆದಿವೆ ಎಂದರು.
ಪಂಚೆ ಹಾಕುವುದನ್ನು ಗೌರವಿಸದೆ ಹೋದ್ರೆ ಅದು ಅಪಮಾನವಾಗುತ್ತೆ !
Date: