ಡ್ರಗ್ಸ್ ಕೇಸ್ ನಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿಗೆ ಬೇಲ್ ಸಿಕ್ಕರೂ ಜೈಲಿನಿಂದ ಮುಕ್ತಿ ಸಿಕ್ಕಿಲ್ಲ. ಬಿಡುಗಡೆ ಆದೇಶ ಜೈಲು ಅಧಿಕಾರಿಗಳಿಗೆ ತಲುಪದ ಹಿನ್ನೆಲೆಯಲ್ಲಿ ಇಂದು ಕೂಡ ನಟಿ ರಾಗಿಣಿ ದ್ವಿವೇದಿ ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ. ಬರೋಬ್ಬರಿ 142 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ ಆಗ್ತಾರಾ ಇಲ್ವಾ ನೋಡಬೇಕಿದೆ
ಕಳೆದ ಎರಡು ದಿನಗಳ ಹಿಂದೆ ಜನವರಿ 21 ರಂದು ರಾಗಿಣಿಗೆ ಸುಪ್ರಿಂಕೊರ್ಟ್ ಜಾಮೀನು ನೀಡಿತ್ತು ಸೆಪ್ಟೆಂಬರ್ 04 2020 ರಲ್ಲಿ ಸಿಸಿಬಿಯಿಂದ ಡ್ರಗ್ ಕೇಸ್ ನಲ್ಲಿ ಬಂಧಿತಳಾಗಿದ್ದ ರಾಗಿಣಿ ನೆನ್ನೆ ಸಂಜೆ ಸುಪ್ರಿಂಕೊರ್ಟ್ ನಿಂದ ಬೆಂಗಳೂರಿನ ಎನ್.ಡಿ.ಪಿ.ಎಸ್ ಕೊರ್ಟ್ ಗೆ ಬೇಲ್ ಆರ್ಡರ್ ಪ್ರತಿ ತಲುಪಿದೆ ಕೊರ್ಟ್ ಅವಧಿ ಮುಗಿದಿದ್ದರಿಂದ ನಿನ್ನೆ ಬೇಲ್ ನ ಷರತ್ತುಗಳನ್ನ ಪೂರೈಸಲಾಗಿಲ್ಲ ಇಂದು ರಾಗಿಣಿ ಪರ ವಕೀಲರು NDPS ಕೊರ್ಟ್ ನಲ್ಲಿ ಬೇಲ್ ಗೆ ಷರತ್ತುಗಳನ್ನು ಪೂರೈಸಲಿದ್ದಾರೆ ನಂತರ ರಾಗಿಣಿ ಬಿಡುಗಡೆಯ ಆದೇಶ ಪ್ರತಿ ಜೈಲಾಧಿಕಾರಿಗಳ ಕೈಗೆ ತಲುಪಲಿದೆ.
ಇದರಿಂದ ಇವತ್ತಾದ್ರು ರಾಗಿಣಿ ರಿಲೀಸ್ ಆಗ್ತಾರಾ ನೋಡಬೇಕಿದೆ, ಹಾಗು ಷರತ್ತುಬದ್ದ ಜಮೀನು ನೀಡಿದ್ದಾರೆ ಎಂದರೆ ರಾಗಿಣಿ ಮೊದಲಿನಂತೆ ಜೀವನ ನೆಡೆಸ್ತಾರ ಸಿನಿಮಾ ಗಳನ್ನ ಮಾಡ್ತಾರಾ ಇಲ್ವಾ ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.