ಟಗರು ಸಿನಿಮಾದ ಬಳಿಕ ನಟ ಧನಂಜಯ್ ಸಿನಿಮಾ ಜರ್ನಿ ಬೇರೆಯದೇ ತಿರುವನ್ನು ಪಡೆದುಕೊಂಡಿದೆ. ಧನಂಜಯ್ ಚಿತ್ರಗಳೆಂದರೆ ಅಭಿಮಾನಿಗಳು ಕಾತರದಿಂದ ಕಾದು ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸಿ ಬರ್ತಾರೆ. ಹೀಗೆ ಟಗರು ಚಿತ್ರದ ನಂತರ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟ ಡಾಲಿ ಧನಂಜಯ್ ಸದ್ಯ ಬಡವ ರಾಸ್ಕಲ್ ಚಿತ್ರದಲ್ಲಿ ಬ್ಯುಸಿ ಇದ್ದಾರೆ.
ಈ ಬಡವ ರಾಸ್ಕಲ್ ಚಿತ್ರದ ನಂತರ ಧನಂಜಯ್ ಹೆಡ್ ಬುಶ್ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಗ್ನಿ ಶ್ರೀಧರ್ ಚಿತ್ರಕತೆಯನ್ನು ಹೆಡ್ ಬುಶ್ ಚಿತ್ರಕ್ಕೆ ಬರೆದಿದ್ದು ಚಿತ್ರದ ಪೋಸ್ಟರ್ ಗಳು ಭಾರೀ ಕುತೂಹಲವನ್ನು ಕೆರಳಿಸುವಂತಿವೆ. ಇನ್ನು ಈ ಚಿತ್ರಕ್ಕೆ ಇದೀಗ ಪಂಜಾಬ್ ಮೂಲದ ನಟಿ ಪಾಯಲ್ ರಜಪೂತ್ ನಾಯಕಿಯಾಗಿ ಆಯ್ಕೆಯಾಗಿದ್ದು ಡಾಲಿ ಧನಂಜಯ್ ಅವರ ಜೊತೆ ರೋಮ್ಯಾನ್ಸ್ ಮಾಡಲು ಸಿದ್ಧರಾಗಿದ್ದಾರೆ.
ತೆಲುಗಿನ ಕೆಲವೊಂದಿಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಪಾಯಲ್ ರಜಪೂತ್ ತಮ್ಮ ಮೊದಲ ತೆಲುಗು ಚಿತ್ರ ಆರ್ ಎಕ್ಸ್ 100 ನಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದರು. ಮೊದಲ ಚಿತ್ರದಲ್ಲಿಯೇ ಹಲವಾರು ಅರೆನಗ್ನ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಪಾಯಲ್ ರಜಪೂತ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇದೀಗ ಧನಂಜಯ್ ಅಭಿನಯದ ಹೆಡ್ ಬುಶ್ ಚಿತ್ರಕ್ಕೆ ಪಾಯಲ್ ಆಯ್ಕೆಯಾಗಿರುವುದು ಭಾರೀ ಕುತೂಹಲ ಕೆರಳಿಸಿದ್ದು ಈ ಚಿತ್ರದಲ್ಲಿಯೂ ಸಹ ಪಾಯಲ್ ರಜಪೂತ್ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.