ಪಂತ್ ಮೇಲಿನ ಭಯದಿಂದ ತಡವಾಗಿ ಡಿಕ್ಲೇರ್ : ರೂಟ್

Date:

ಇಂಗ್ಲೆಂಡ್ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಮಡದ ನಾಯಕ ಜೋ ರೂಟ್ ದ್ವಿಶತಕ ನೆರವಿನಿಂದ 500ಕ್ಕೂ ಅಧಿಕ ರನ್ ಪೇರಿಸಿದ ಇಂಗ್ಲೆಂಡ್ ಬಳಿಕ ಟೀಮ್ ಇಂಡಿಯಾವನ್ನು ಬೇಗನೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಈ ಉತ್ತಮ ಪ್ರದರ್ಶನದ ಬಳಿಕವೂ ಇಂಗ್ಲೆಂಡ್ ತಂಡದ ಒಂದು ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಹೌದು, ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಇನ್ನಿಂಗ್ಸ್‌ ಡಿಕ್ಲೇರ್ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿತು. ಬೇಗನೆ ಡಿಕ್ಲೇರ್ ಮಾಡಿದರೆ ಭಾರತದ ವಿರುದ್ಧ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂಬಂತಾ ಮಾತುಗಳು ಪಂದ್ಯದ ಫಲಿತಾಂಶಕ್ಕೂ ಮುನ್ನ ಸಾಕಷ್ಟು ಚರ್ಚೆ ನಡೆಯಿತು. ಅನೇಕ ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಪಂಡಿತರು ಈ ಚರ್ಚೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಆದರೆ ಈ ಎಲ್ಲಾ ಚರ್ಚೆಗಳ ಮಧ್ಯೆಯೇ ಇಂಗ್ಲೆಂಡ್ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಗೆಲುವಿನ ಬಳಿಕ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ತಾನು ಯಾವ ಕಾರಣಕ್ಕೆ ತಡವಾಗಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ ಎಂಬುದನ್ನು ವಿವರಿಸಿದ್ದಾರೆ. ಇದಕ್ಕೆ ಟೀಮ್ ಇಂಡಿಯಾದ ಓರ್ವ ಆಟಗಾರನ ಭಯವೇ ಕಾರಣ ಎಂದು ಅವರು ಸ್ಪಷ್ಟವಾಗಿ ಹೇಳಿದರು. ಹಾಗಾದರೆ ಆ ಆಟಗಾರ ಯಾರು? ಮುಂದೆ ಓದಿ..

ಇಂಗ್ಲೆಂಡ್ ತಡವಾಗಿ ಇನ್ನಿಂಗ್ಸ್ ಡಿಕ್ಲೇರ್ ಮಾಡಲು ಟೀಮ್ ಇಂಡಿಯಾದ ಯುವ ಆಟಗಾರ ರಿಷಭ್ ಪಂತ್ ಭಯವೇ ಕಾರಣ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬಹಿರಂಗವಾಗಿಯೇ ಹೇಳಿದ್ದಾರೆ. ಈ ಭಯದಿಂದಲೇ ಇಂಗ್ಲೆಂಡ್ 400 ರನ್‌ಗಳ ಮುನ್ನಡೆಯ ಬಳಿಕವೂ ಡಿಕ್ಲೇರ್ ಮಾಡಿರಲಿಲ್ಲ ಎಂದು ಜೋ ರೂಟ್ ವಿವರಿಸಿದ್ದಾರೆ.

“ನಾವು ಮೊದಲೇ ಡಿಕ್ಲೇರ್ ಮಾಡಿಕೊಳ್ಳಬಹುದಾಗಿತ್ತು. ಖಂಡಿತ ನಾವು ಮಾಡಬಹುದಾಗಿತ್ತು. ಆದರೆ ನಾನು ಕೇವಲ ಎರಡು ಫಲಿತಾಂಶಗಳು ಮಾತ್ರವೇ ಬರಬೇಕೆಂದು ಬಯಸಿದ್ದೆ. ನಮ್ಮ ಬೌಲರ್‌ಗಳಿಗೆ ಸ್ವಲ್ಪ ಸಮಯವನ್ನು ನೀಡಲು ನಾವು ಬಯಸಿದ್ದೆವು. ಮೊದಲಿಗೆ ನಾವು 400 ರನ್‌ಗಳ ಗುರಿ ನೀಡಲು ಬಯಸಿದ್ದೆವು, ಆದರೆ ಬಳಿಕ ಮತ್ತಷ್ಟು ಹೆಚ್ಚಿಸುವ ನಿರ್ಧಾರ ತೆಗೆದುಕೊಂಡೆವು” ಎಂದಿದ್ದಾರೆ ಜೋ ರೂಟ್.

“ರಿಷಫ್ ಪಂತ್ ಒಂದು ಸೆಶನ್ ಬ್ಯಾಟಿಂಗ್ ಮಾಡಿದರೆ ಪಂದ್ಯವನ್ನು ಮತ್ತಷ್ಟು ಕುತೂಹಲವಾಗಿಸುತ್ತಿದ್ದರು. ಆದರೆ ನಾನು ವಿಕೆಟ್‌ಅನ್ನು ತೆಗೆಯುವ ಒತ್ತಡವನ್ನು ಹೇರಿಕೊಳ್ಳಲು ಬಯಸಿರಲಿಲ್ಲ. ಈ ಪಿಚ್‌ನಲ್ಲಿ ಬೌಲರ್‌ಗಳು ವಿಕೆಟ್ ಪಡೆಯುವುದನ್ನು ಮಾತ್ರವೇ ಕೇಂದ್ರೀಕರಿಸಲು ಬಯಸಿದ್ದೆ. ನಾವು ಯಾವಾಗಲೂ 10 ವಿಕೆಟ್ ಪಡೆಯಲು ಅವಕಾಶವನ್ನು ಸೃಷ್ಟಿಸಬಲ್ಲೆವು. ಆದರೆ ಅದಕ್ಕಾಗಿ ನಾವು ಸ್ವಲ್ಪ ಶಿಸ್ತಿನಿಂದ ಇದ್ದು ನಮ್ಮ ಬಳಿಗೆ ಬರುವ ಅವಕಾಶವನ್ನು ಬಳಸಿಕೊಳ್ಳಬೇಕಿತ್ತು. ಎಲ್ಲವೂ ನಮ್ಮ ಪರವಾಗಿ ನಡೆದಿರುವುದಕ್ಕೆ ನಾನು ಸಂತಸಪಡುತ್ತೇನೆ” ಎಂದು ಜೋ ರೂಟ್ ಹೇಳಿದರು.

“ಈ ಗೆಲುವು ನಿಜಕ್ಕೂ ಅದ್ಭುತವಾದ ಗೆಲುವು. ಆದರೆ ಇದು ಕಢವಲ ಆರಂಭ ಎಂಬುದು ನಮಗೆ ತಿಳಿದಿದೆ. ಭಾರತ ಅದ್ಭುತವಾದ ದೇಶವಾಗಿದ್ದು ಶ್ರೇಷ್ಠವಾದ ಆಟಗಾರರನ್ನು ಒಳಗೊಂಡಿದೆ. ಅವರು ನಮ್ಮಮೇಲೆ ಬಲಿಷ್ಠವಾಗಿ ಬರಬಹುದು. ಆದರೆ ಈಗ 1-0 ಅಂತರವನ್ನು ಹೊಂದಿರುವುದು ನಿಜಕ್ಕೂ ಉತ್ತಮ. ಈ ವಾರದಲ್ಲಿ ನಾವು ಆಡಿದ ರೀತಿಗೆ ನಿಜಕ್ಕೂ ಹೆಮ್ಮೆಪಡುತ್ತೇವೆ. ನಾವು ಕೆಲ ಪ್ರದೇಶಗಳಲ್ಲಿ ಇನ್ನೂ ಉತ್ತಮವಾಗಬೇಕಿದೆ” ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅಭಿಪ್ರಾಯವನ್ನು ವ್ಯಕ್ತಡಿಸಿದರು.

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...