ಪಕ್ಕದ ಮನೆಯವರ ಜಗಳಕ್ಕೆ 8 ವರ್ಷದ ಬಾಲಕನ ಕೊಲೆ!
ಬೆಂಗಳೂರು: ಪಕ್ಕದ ಮನೆಯವರ ಜಗಳಕ್ಕೆ 8 ವರ್ಷದ ಬಾಲಕನ ಕೊಲೆಯಾಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಮಾನಂದ (8) ಕೊಲೆಯಾದ ಬಾಲಕನಾಗಿದ್ದು, ಆರೋಪಿ ಮತ್ತೂರು ಎಂಬಾತನಿಂದ ಕೃತ್ಯ ನಡೆದಿದೆ. ಬಾಲಕ ರಮಾನಂದ ಕುಟುಂಬ ಮತ್ತು ಮತ್ತೂರು ಕುಟುಂಬ ನಡುವೆ ಗಲಾಟೆ ನಡೆದಿದೆ.
ಈ ಹಿನ್ನೆಲೆ ಬಾಲಕನನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಆರೋಪಿ ಮತ್ತೂರು ಮೃತದೇಹವನ್ನು ಚೀಲದಲ್ಲಿ ಕಟ್ಟಿ ಬಿಸಾಡಿದ್ದು, ನಿನ್ನೆ ರಾಯಸಂದ್ರ ಕೆರೆ ಬಳಿ ಮೃತದೇಹ ಪತ್ತೆಯಾಗಿದೆ. ಸದ್ಯ ಆರೋಪಿ ಮತ್ತೂರು ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.