ನವದೆಹಲಿ: ಕಾಂಗ್ರೆಸ್ಗೆ ಮತ್ತೊಂದು ಶಾಕ್ ಎದುರಾಗಿದ್ದು, ವಕ್ತಾರ ಗೌರವ್ ವಲ್ಲಭ್ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿರುವ ವಲ್ಲಭ್, ‘‘ ನಾನು ಭಾವುಕನಾಗಿದ್ದೇನೆ, ಮನಸ್ಸು ಸಂಕಟಪಡುತ್ತಿದೆ, ನಾನು ಬಹಳಷ್ಟು ಹೇಳಲು, ಬರೆಯಲು ಬಯಸುತ್ತೇನೆ, ಆದರೆ ನನ್ನ ಮಾತುಗಳು ಬೇರೆಯವರಿಗೆ ನೋವುಂಟು ಮಾಡಬಹುದು ಹೀಗಾಗಿ ನನ್ನ ಮಾತುಗಳು ನನ್ನಲ್ಲೇ ಉಳಿಯುತ್ತಿದೆ’’ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆದ ಬಳಿಕ ಪಕ್ಷವು ಅವರನ್ನು ರಾಷ್ಟ್ರೀಯ ವಕ್ತಾರನನ್ನಾಗಿ ಮಾಡಿತು. ಹಲವು ವಿಷಯಗಳಲ್ಲಿ ಪಕ್ಷದ ನಿಲುವನ್ನು ಜನರ ಮುಂದೆ ಇಡಲಾಯಿತು, ಆದರೆ ಕೆಲವು ದಿನಗಳಿಂದ ಪಕ್ಷದ ನಿಲುವಿನಿಂದ ನನಗೆ ಬೇಸರವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಲ್ಲಿ ಕಾಂಗ್ರೆಸ್ ಪಕ್ಷದ ನಿಲುವಿನಿಂದ ನಾನು ಅಸಮಾಧಾನಗೊಂಡಿದ್ದೇನೆ. ನಾನು ಹುಟ್ಟಿನಿಂದ ಹಿಂದೂ ಮತ್ತು ವೃತ್ತಿಯಲ್ಲಿ ಶಿಕ್ಷಕ. ಪಕ್ಷದ ನಿಲುವು ನನ್ನ ಭಾವನೆಗಳಿಗೆ ಸದಾ ಪೆಟ್ಟು ಕೊಡುತ್ತಿತ್ತು ಎಂದಿದ್ದಾರೆ.
ಪಕ್ಷದ ನಿಲುವಿನಿಂದ ನನಗೆ ಬೇಸರ: ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ರಾಜೀನಾಮೆ
Date: