ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಜಾರಿಗೊಳಿಸಲಾಗಿತ್ತು. ಇನ್ನು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲ ದಿನಗಳಲ್ಲಿಯೇ ಬಿಎಸ್ ಯಡಿಯೂರಪ್ಪನವರು ಟಿಪ್ಪು ಜಯಂತಿಯನ್ನು ರಾಜ್ಯಾದ್ಯಂತ ಸರ್ಕಾರಿ ಗೌರವ ದೊಡನೆ ಆಚರಣೆ ಮಾಡುವುದನ್ನು ಕಿತ್ತು ಹಾಕಿದರು. ಹೀಗೆ ಟಿಪ್ಪು ಜಯಂತಿಗೆ ಬ್ರೇಕ್ ಹಾಕಿದ ಯಡಿಯೂರಪ್ಪನವರು ಇದೀಗ ಇತಿಹಾಸ ಪುಸ್ತಕದಿಂದ ಟಿಪ್ಪು ಪಾಠವನ್ನೇ ತೆಗೆದು ಹಾಕುವ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಹೌದು ಇಂದು ಮಾಧ್ಯಮದವರೊಡನೆ ಮಾತನಾಡಿದ ಯಡಿಯೂರಪ್ಪನವರು ಈ ವಿಷಯವನ್ನು ಪ್ರಸ್ತಾಪಿಸಿದ್ದು ಇತಿಹಾಸ ಪಟ್ಟಿನಿಂದ ಟಿಪ್ಪು ಪಾಠವನ್ನು ತೆಗೆದು ಹಾಕುವುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಬ್ರೇಕ್ ಹಾಕಿದ್ದ ಯಡಿಯೂರಪ್ಪನವರು ಇದೀಗ ಟಿಪ್ಪು ಪಾಠಕ್ಕೂ ಬ್ರೇಕ್ ಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನು ಯಡಿಯೂರಪ್ಪನವರ ಈ ನಿರ್ಧಾರಕ್ಕೆ ಕೆಲ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.