ಮುಂಬೈ: ಬಾಲಿವುಡ್ ನ ಹಾಟ್ ಆ್ಯಂಡ್ ಬೋಲ್ಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಾಟ್ ವರ್ಕ್ ಔಟ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಫಿಟ್ನೆಸ್ ಉತ್ಸಾಹದಲ್ಲಿರುವ ಜಾಕ್ವೆಲಿನ್, ಕಪ್ಪು ಉಡುಪಿಯಲ್ಲಿ ಕನ್ನಡಿ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡಿರುವ ಚಿತ್ರವನ್ನು ಇನ್ಸಾಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಪಡ್ಡೆ ಹೈಕಳ ನಿದ್ದೆ ಗೆಡಿಸಿದೆ. ಭಿನ್ನ, ವಿಭಿನ್ನ ರೀತಿಯಲ್ಲಿ ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿ ಜಾಕ್ವೆಲಿನ್ ಮಾಡಿದ್ದ ಯೋಗ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. 2, 204,105 ಜನರ ವೀಕ್ಷಣೆ ಪಡೆದುಕೊಂಡಿತ್ತು.
ಮಹಿಳಾ ವರ್ಲ್ಡ್ ಕಪ್ ವೇಳಾಪಟ್ಟಿ ಪ್ರಕಟ
ಮಹಿಳಾ ವರ್ಲ್ಡ್ ಕಪ್ ವೇಳಾಪಟ್ಟಿ ಪ್ರಕಟ
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022 ಮಾರ್ಚ್ 4 ರಿಂದ ನ್ಯೂಜಿಲೆಂಡ್‌ನಲ್ಲಿ ನಡೆಯಲಿದ್ದು, ಅಂತಿಮ ಪಂದ್ಯ ಏಪ್ರಿಲ್ 3 ರಂದು ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಪ್ರಕಟಿಸಿದೆ.
ಮಹಿಳಾ ವಿಶ್ವಕಪ್ ಅನ್ನು ಈ ಮೊದಲು 2021 ರಲ್ಲಿ ನಡೆಸಲು ನಿರ್ಧರಿಸಲಾಗಿತ್ತು ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಐಸಿಸಿ ಈ ಟೂರ್ನಿಯನ್ನು 2022 ರವರೆಗೆ ಮುಂದೂಡಿತ್ತು. ಐಸಿಸಿ ತನ್ನ ಪರಿಷ್ಕೃತ ವೇಳಾಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ 50 ಓವರ್‌ಗಳ ಪಂದ್ಯಾವಳಿಯಲ್ಲಿ ವಿಶ್ವದ ಎಂಟು ತಂಡಗಳು ಭಾಗವಹಿಸಲಿದ್ದು, ನ್ಯೂಜಿಲೆಂಡ್‌ನ ಆರು ನಗರಗಳಲ್ಲಿ ಒಟ್ಟು 31 ಪಂದ್ಯಗಳನ್ನು ನಡೆಸಲಾಗುವುದು.
ಆಕ್ಲೆಂಡ್‌ನ ಈಡನ್ ಪಾರ್ಕ್, ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್, ಟೌರಂಗಾದ ಬೇ ಓವಲ್, ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್, ಕ್ರೈಸ್ಟ್‌ಚರ್ಚ್‌ನ ಹೆಗ್ಲೆ ಓವಲ್ ಮತ್ತು ಡುನೆಡಿನ್ ವಿಶ್ವವಿದ್ಯಾಲಯ ಓವಲ್‌ನಲ್ಲಿ ಪಂದ್ಯಗಳು ನಡೆಯಲಿವೆ. ಸೆಮಿಫೈನಲ್ ಪಂದ್ಯಗಳು ಕ್ರೈಸ್ಟ್ಚರ್ಚ್ ಮತ್ತು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದ್ದು, ಅಂತಿಮ ಪಂದ್ಯ ಕ್ರೈಸ್ಟ್ಚರ್ಚ್ ನಲ್ಲಿ ನಡೆಯಲಿದೆ.
ಆತಿಥೇಯರಾದ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತ ಈಗಾಗಲೇ ಪಂದ್ಯಾವಳಿಗೆ ಅರ್ಹತೆ ಪಡೆದಿದೆ. ಉಳಿದ ಮೂರು ತಂಡಗಳನ್ನು ಐಸಿಸಿ ಅರ್ಹತಾ ಪಂದ್ಯಾವಳಿಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಹತಾ ಪಂದ್ಯಾವಳಿ ಶ್ರೀಲಂಕಾದಲ್ಲಿ ಜೂನ್ 26 ರಿಂದ 2021 ಜುಲೈ 10 ರವರೆಗೆ ನಡೆಯಲಿದೆ. ವಿಶ್ವಕಪ್ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮತ್ತು ಅರ್ಹತಾ ಪಂದ್ಯಗಳಲ್ಲಿ ಒಂದಾಗಿದೆ.
ವಿಶ್ವಕಪ್ ವೇಳಾಪಟ್ಟಿ
ಬೇ ಓವಲ್, ಟೌರಂಗಾ
04 ಮಾರ್ಚ್ 2022 – ನ್ಯೂಜಿಲೆಂಡ್ v/s ಕ್ವಾಲಿಫೈಯರ್
06 ಮಾರ್ಚ್ 2022 – ಕ್ವಾಲಿಫೈಯರ್ v/s ಟೀಂ ಇಂಡಿಯಾ
08 ಮಾರ್ಚ್ 2022 – ಆಸ್ಟ್ರೇಲಿಯಾ v/s ಕ್ವಾಲಿಫೈಯರ್
11 ಮಾರ್ಚ್ 2022 – ಕ್ವಾಲಿಫೈಯರ್ v/s ದಕ್ಷಿಣ ಆಫ್ರಿಕಾ
14 ಮಾರ್ಚ್ 2022 – ದಕ್ಷಿಣ ಆಫ್ರಿಕಾ v/s ಇಂಗ್ಲೆಂಡ್
16 ಮಾರ್ಚ್ 2022 – ಇಂಗ್ಲೆಂಡ್ v/s ಟೀಂ ಇಂಡಿಯಾ
18 ಮಾರ್ಚ್ 2022 – ಕ್ವಾಲಿಫೈಯರ್ v/s ಕ್ವಾಲಿಫೈಯರ್
ಯೂನಿವರ್ಸಿಟಿ ಓವಲ್, ಡುನೆಡಿನ್
05 ಮಾರ್ಚ್ 2022 – ಕ್ವಾಲಿಫೈಯರ್ v/s ದಕ್ಷಿಣ ಆಫ್ರಿಕಾ
07 ಮಾರ್ಚ್ 2022 – ನ್ಯೂಜಿಲೆಂಡ್ v/s ಕ್ವಾಲಿಫೈಯರ್
09 ಮಾರ್ಚ್ 2022 – ಕ್ವಾಲಿಫೈಯರ್ v/s ಇಂಗ್ಲೆಂಡ್
ಸೆಡ್ಡನ್ ಪಾರ್ಕ್, ಹ್ಯಾಮಿಲ್ಟನ್
05 ಮಾರ್ಚ್ 2022 – ಆಸ್ಟ್ರೇಲಿಯಾ v/s ಇಂಗ್ಲೆಂಡ್
10 ಮಾರ್ಚ್ 2022 – ನ್ಯೂಜಿಲೆಂಡ್ v/s ಟೀಂ ಇಂಡಿಯಾ
12 ಮಾರ್ಚ್ 2022 – ಕ್ವಾಲಿಫೈಯರ್ v/s ಟೀಂ ಇಂಡಿಯಾ
14 ಮಾರ್ಚ್ 2022 – ಕ್ವಾಲಿಫೈಯರ್ v/s ಕ್ವಾಲಿಫೈಯರ್
17 ಮಾರ್ಚ್ 2022 – ನ್ಯೂಜಿಲೆಂಡ್ v/s ದಕ್ಷಿಣ ಆಫ್ರಿಕಾ
21 ಮಾರ್ಚ್ 2022 – ಕ್ವಾಲಿಫೈಯರ್ v/s ಕ್ವಾಲಿಫೈಯರ್
22 ಮಾರ್ಚ್ 2022 – ಟೀಂ ಇಂಡಿಯಾ v/s ಕ್ವಾಲಿಫೈಯರ್
ಬೇಸಿನ್ ರಿಸರ್ವ್, ವೆಲ್ಲಿಂಗ್ಟನ್
13 ಮಾರ್ಚ್ 2022 – ನ್ಯೂಜಿಲೆಂಡ್ v/s ಆಸ್ಟ್ರೇಲಿಯಾ
15 ಮಾರ್ಚ್ 2022 – ಆಸ್ಟ್ರೇಲಿಯಾ v/s ಕ್ವಾಲಿಫೈಯರ್
22 ಮಾರ್ಚ್ 2022 – ದಕ್ಷಿಣ ಆಫ್ರಿಕಾ v/s ಆಸ್ಟ್ರೇಲಿಯಾ
24 ಮಾರ್ಚ್ 2022 – ದಕ್ಷಿಣ ಆಫ್ರಿಕಾ v/s ಕ್ವಾಲಿಫೈಯರ್
25 ಮಾರ್ಚ್ 2022 – ಕ್ವಾಲಿಫೈಯರ್ v/s ಆಸ್ಟ್ರೇಲಿಯಾ
27 ಮಾರ್ಚ್ 2022 – ಇಂಗ್ಲೆಂಡ್ v/s ಕ್ವಾಲಿಫೈಯರ್
30 ಮಾರ್ಚ್ 2022 – ಸೆಮಿ-ಫೈನಲ್ 1
ಈಡನ್ ಪಾರ್ಕ್, ಆಕ್ಲೆಂಡ್
19 ಮಾರ್ಚ್ 2022 – ಟೀಂ ಇಂಡಿಯಾ v/s ಆಸ್ಟ್ರೇಲಿಯಾ
20 ಮಾರ್ಚ್ 2022 – ನ್ಯೂಜಿಲೆಂಡ್ v/s ಇಂಗ್ಲೆಂಡ್
ಹ್ಯಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್
24 ಮಾರ್ಚ್ 2022 – ಇಂಗ್ಲೆಂಡ್ v/s ಕ್ವಾಲಿಫೈಯರ್
26 ಮಾರ್ಚ್ 2022 – ನ್ಯೂಜಿಲೆಂಡ್ v/s ಕ್ವಾಲಿಫೈಯರ್
27 ಮಾರ್ಚ್ 2022 – ಟೀಂ ಇಂಡಿಯಾ v/s ದಕ್ಷಿಣ ಆಫ್ರಿಕಾ
31 ಮಾರ್ಚ್ 2022 – 2ನೇ ಸೆಮಿ-ಫೈನಲ್ ಪಂದ್ಯ
03 ಎಪ್ರಿಲ್ 2022 – ಫೈನಲ್ ಪಂದ್ಯ