ಪತಿ ನಾಪತ್ತೆಯಾದ 4 ವರ್ಷದ ನಂತರ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಸಂಗ ಕುಂದಾಪುರದಲ್ಲಿ ನಡೆದಿದೆ.
ಮದುವೆಯಾದ ಬಳಿಕ ಹೊರಜಿಲ್ಲೆಗಳಲ್ಲಿ ಹೋಟೇಲ್ ಕೆಲಸ ಮಾಡಿಕೊಂಡಿದ್ದ ಮದ್ಯವ್ಯಸನಿ ಪತಿ ೨೦೧೬ರಿಂದ ನಾಪತ್ತೆಯಾಗಿದ್ದಾರೆಂದು ಈಗ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತೆಕ್ಕಟ್ಟೆ ಅರೆಬೈಲು ನಿವಾಸಿ ಚಂದ್ರಿಕಾ (೩೪) ಎಂಬುವರು ೨೦೧೧ರ ಮೇ ೯ರಂದು ರಾಘೇಂದ್ರ ಶೆಟ್ಟಿ ಎಂಬುವವರನ್ನು ವಿವಾಹವಾಗಿದ್ದರು. ಬಳಿಕ ರಾಘವೇಂದ್ರ ಶೆಟ್ಟಿ ಬಳ್ಳಾರಿ, ಸಾಗರ, ಹಾಗೂ ಹುಬ್ಬಳ್ಳಿಯಲ್ಲಿ ಹೋಟೆಲಲ್ಲಿ ಕೆಲಸ ಮಾಡಿಕೊಂಡಿದ್ದರು. ೨೦೧೫ ಸೆಪ್ಟೆಂಬರಲ್ಲಿ ಚಂದ್ರಿಕಾ ಹುಬ್ಬಳ್ಳಿಗೆ ಹೋಗಿ ಪತಿ ರಾಘವೇಂದ್ರ ಶೆಟ್ಟಿಯನ್ನು ಕರೆದುಕೊಂಡು ಬಂದು ಪರಿಚಯದ ಮಹೇಶ್ ಶೆಟ್ಟಿ ಎಂಬುವವರ ಮಣೂರು ಇಂದ್ರಪ್ರಸ್ಥ ಹೋಟೆಲಲ್ಲಿ ಕೆಲಸಕ್ಕೆ ಸೇರಿಸಿದ್ದರು. ಅಲ್ಲಿ ೬ ತಿಂಗಳು ಕೆಲಸ ಮಾಡಿ, ನಂತರÀ ಕೆಲಸ ಬಿಟ್ಟು ಮನೆಯಲ್ಲೇ ಇದ್ದು ಮದ್ಯಪಾನ ಮಾಡಿ, ನಿತ್ಯ ಗಲಾಟೆ ಮಾಡುತ್ತಿದ್ದರು. ನಂತರ ಒಂದು ದಿನ ಕುಂದಾಪುರ ಹರಿಪ್ರಸಾದ್ ಹೋಟೆಲಲ್ಲಿ ಕೆಲಸ ಮಾಡುವುದಾಗಿ ಹೇಳಿ ಹೋದವರು ವಾಪಸ್ಸಾಗಿಲ್ಲ. ಮನೆ ಬಿಟ್ಟಲ್ಲಿಂದ ಚಂದ್ರಿಕಾಗೆ ಫೋನ್ ಮಾಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪತಿ ನಾಪತ್ತೆಯಾಗಿದ್ದು 2016ರಲ್ಲಿ, ಪತ್ನಿ ಕಂಪ್ಲೇಂಟ್ ಕೊಟ್ಟಿದ್ದು ಇವಾಗ!
Date: