ವಿಚ್ಚೇದನ ನೀಡಲು ನಿರಾಕರಿಸಿದ ಪತ್ನಿಯ ಅಶ್ಲೀಲ ಫೋಟೊಗಳನ್ನ ತೆಗೆದುಕೊಡುವಂತೆಪತಿಯೇ ಸುಪಾರಿ ನೀಡಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ವಿಠಲನಗರದಲ್ಲಿ ಬೆಳಕಿಗೆ ಬಂದಿದೆ.
ಖಾಸಗಿ ಕಂಪನಿ ಉದ್ಯೋಗಿ ಶ್ರೀಕಾಂತ್ ಎಂಬಾತನನ್ನು ವಿಠಲ ನಗರದ ಮಹಿಳೆಯೊಬ್ಬರು 5 ವರ್ಷಗಳ ಹಿಂದೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಮದುವೆ ಆಗಿದ್ದಾರೆ. ಬಳಿಕ ಬೆಂಗಳೂರಲ್ಲಿ ಅವರಿಬ್ಬರು ಸಹ ವಾಸವಿದ್ದರು. ಮೊದಲ 3 ವರ್ಷ ಇವರ ಹೊಸ ದಾಂಪತ್ಯ ಜೀವನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲವಂತೆ./ ಬಳಿಕ ಇಬ್ಬರ ನಡುವೆ ಕಲಹ ಉಂಟಾಗಿದೆಯಂತೆ. ಪತ್ನಿಗೆ ಕಿರುಕುಳ ನೀಡಲು ಶುರುಮಾಡಿದ ಶ್ರೀಕಾಂತ್, ಪತ್ನಿಯನ್ನ ತವರು ಮನೆಯಿಂದ ಹಣ, ಒಡವೆ ತೆಗೆದುಕೊಂಡು ಬಾ ಎಂದು ದೈಹಿಕ, ಮಾನಸಿಕ ಹಿಂಸೆ ನೀಡಲಾರಂಭಿಸಿದ್ದನಂತೆ. ಹಣ ತರದೇ ಇದ್ದರೆ ವಿಚ್ಚೇದ ನೀಡುವಂತೆ ಹೇಳಿದ್ದಾರೆ. ಅವನ ಟಾರ್ಚರ್ ತಡೆಯಲಾಗದೆ ಆ ಮಹಿಳೆ ಕೆಆರ್ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಶ್ರೀಕಾಂತ್ ತಪ್ಪೊಪ್ಪಿಕೊಂಡ ನಂತರ ಪತ್ನಿ ದೂರು ವಾಪಸ್ಸು ಪಡೆದಿದ್ದರಂತೆ.
ಬುದ್ಧಿ ಕಲಿಯದ ಶ್ರೀಕಾಂತ್ ಹಾಗೇ ಕೇಳಿದ್ರೆ ಡೈವರ್ಸ್ ಕೊಡಲ್ಲ ಎಂದು ಮಾರ್ಚ್ 26ರಂದು ತನ್ನ ಅಪಾರ್ಟ್ಮೆಂಟ್ ಕೀಯನ್ನ ಅಪರಿಚಿತ ವ್ಯಕ್ತಿಗೆ ನೀಡಿದ್ದ. ತನ್ನ ಪತ್ನಿಯ ಅಶ್ಲೀಲ ಭಾವಚಿತ್ರಗಳನ್ನ ತೆಗೆದುಕೊಂಡು ಬರುವಂತೆ ಸುಪಾರಿ ಕೊಟ್ಟಿದ್ದ ನಂತೆ….ಅದು ಮಹಿಳೆಗೆ ತಿಳಿದಿದ್ದು ಆತತನ್ನು ವಿಚಾರಿಸಿದಾಗ ಶ್ರೀಕಾಂತ್ ಸುಪಾರಿ ಕೊಟ್ಟಿದ್ದು ತಿಳಿದಿದೆ. ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ,
ಪತ್ನಿಯ ಅಶ್ಲೀಲ ಫೋಟೋ ತೆಗೆಯೋಕೆ ಗಂಡನೇ ಕೊಟ್ಟ ಸುಪಾರಿ..!
Date: