ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಿಡುಗಡೆಯಾಗಿದ್ದಾರೆ. ಇಂದು ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರೇವಣ್ಣ ಅವರು ಜೈಲಿನಿಂದ ಹೊರ ಬಂದರು. ರೇವಣ್ಣ ಅವರು ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಮಾಧ್ಯಮಗಳತ್ತ ಕೈ ಮುಗಿದು ಮುಂದೆ ಸಾಗಿದರು. ರೇವಣ್ಣ ಬರುವಿಕೆಗಾಗಿ ಅಭಿಮಾನಿಗಳು ಜೈಲಿನ ಹೊರಗೆ ಕಾಯುತ್ತಿದ್ದರು. ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಆದರೂ ರೇವಣ್ಣ ಹೊರಗೆ ಬರ್ತಿದ್ದಂತೆ ಕಾರ್ಯಕರ್ತರು ಕಾರಿಗೆ ಅಡ್ಡ ಬಂದಿದ್ದಾರೆ. ಈ ವೇಳೆ ರೇವಣ್ಣ ಕಾರ್ ಮೂವ್ ಮಾಡಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಸಂತ್ರಸ್ತೆಯ ಕಿಡ್ನಾಪ್ ಆರೋಪ ಎದುರಿಸುತ್ತಿದ್ದ ರೇವಣ್ಣ ಅವರು 6 ದಿನಗಳ ಹಿಂದೆ ಜೈಲು ಸೇರಿದ್ದರು. ನಿನ್ನೆ ಇಡೀ ದಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿತ್ತು. ಬಳಿಕ ಸಂಜೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿತ್ತು.






