ನೀರ್ ದೋಸೆ ಅಂತಹ ಹಿಟ್ ಚಿತ್ರ ನೀಡಿದ್ದ ವಿಜಯಪ್ರಸಾದ್ ಮತ್ತು ನೀನಾಸಂ ಸತೀಶ್ ಕಾಂಬಿನೇಷನ್ ನಲ್ಲಿ ತಯಾರಾಗಿರುವ ಚಿತ್ರವೇ ಪರಿಮಳಾ ಲಾಡ್ಜ್. ನೀರ್ ದೋಸೆ ಮುಖಾಂತರ ಪಡ್ಡೆ ಹುಡುಗರಿಗೆ ಟ್ರೀಟ್ ನೀಡಿದ್ದ ವಿಜಯಪ್ರಸಾದ್ ಅವರು ಈ ಚಿತ್ರದ ಮೂಲಕವೂ ಸಹ ಭರಪೂರ ಮನರಂಜನೆ ನೀಡುವುದು ಪಕ್ಕಾ ಆಗಿದೆ.
ಹೌದು ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಟೀಸರ್ ನೋಡಿದ ಪ್ರೇಕ್ಷಕರು ಇದು ಮತ್ತೊಂದು ನೀರ್ ದೋಸೆ ಆಗಲಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಪೊಲೀಸ್ ವಿಚಾರಣೆ ಸೀನ್ ಒಂದನ್ನು ಟೀಸರ್ ನಲ್ಲಿ ಹಾಕಲಾಗಿದ್ದು ಅದರಲ್ಲಿ ಲೂಸ್ ಮಾದ ಯೋಗಿ, ಸುಮನ್ ರಂಗನಾಥ್, ನೀನಾಸಂ ಸತೀಶ್ ಮತ್ತು ಬುಲೆಟ್ ಪ್ರಕಾಶ್ ಲಾಡ್ಜ್ ರೇಡ್ ಮಾಡುವಾಗ ಸಿಕ್ಕಿ ಬಿದ್ದಿರುತ್ತಾರೆ. ಟೀಸರ್ನಲ್ಲಿನ ಡಬ್ಬಲ್ ಮೀನಿಂಗ್ ಡೈಲಾಗ್ಗಳು ಸಖತ್ ಸದ್ದು ಮಾಡುತ್ತಿದ್ದು ಒಳ್ಳೆಯ ಹೈಪ್ ಕ್ರಿಯೇಟ್ ಮಾಡುತ್ತಿದೆ.