ಪರೀಕ್ಷೆ ಬರೆಯಬೇಕು ಅಂದ್ರೆ ತಾಳಿ ತೆಗೆಯಬೇಕು ಅಂತಾ ಹೇಳಿದ್ರು: ಅಭ್ಯರ್ಥಿ ರಾಜಮ್ಮ

0
233

ಕಲಬುರಗಿ: ಕಲಬುರಗಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಗ್ರೂಪ್ ಸಿ ಹುದ್ದೆಗೆ ನಡೆಯುತ್ತಿರುವ ಪರೀಕ್ಷೆಯಲ್ಲಿ ಅಕ್ರಮ ತಡೆಯಲು ತಾಳಿ, ಕಾಲುಂಗುರ ಹಾಗೂ ಕಿವಿಯಲ್ಲಿದ್ದ ಓಲೆಗಳನ್ನು ಅಧಿಕಾರಿಗಳು ತೆಗೆಸಿದ್ದರು. ಈ ವೇಳೆ ತಾಳಿ ತೆಗೆಯಲು ಹಿಂದೇಟು ಹಾಕಿದ ಮಹಿಳೆಯರಿಗೆ ಪರೀಕ್ಷೆ ಬರೆಯಲು ಅಧಿಕಾರಿಗಳು ಅವಕಾಶ ನಿರಾಕರಿಸಿದ್ದರು. ಅಲ್ಲದೇ ಕಿವಿ ಓಲೆ ತೆಗೆಯಲು ಬರದಿದ್ದಾಗ ಚಿನ್ನದಂಗಡಿಗೆ ಹೋಗಿ ಮಹಿಳೆಯರು ತೆಗೆಸಿಕೊಂಡು ಬಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಅಭ್ಯರ್ಥಿ ರಾಜಮ್ಮ ನೋವಿನ ಮಾತುಗಳಾನ್ನಾಡಿದ್ದಾರೆ.
ಹಿಂದು ಸಂಪ್ರದಾಯದಲ್ಲಿ ತಾಳಿ ಕಾಲುಂಗರಕ್ಕೆ ತನ್ನದೇ ಆದ ಸಂಸ್ಕ್ರತಿಯಿದೆ. ಗಂಡ ಸತ್ತಾಗ ಅಥವಾ ಹೆರಿಗೆ ಸಮಯದಲ್ಲಿ ಮಾತ್ರ ತಾಳಿ ತೆಗೆಯುತ್ತೆವೆ. ಇಷ್ಟು ಹೇಳಿದ್ರು ಪರೀಕ್ಷಾ ಸಿಬ್ಬಂದಿ ನಮ್ಮ ಮಾತಿಗೆ ಬೆಲೆ ಕೊಡಲಿಲ್ಲ, ಪರೀಕ್ಷೆ ಬರೆಯಬೇಕು ಅಂದ್ರೆ ತಾಳಿ ತೆಗೆಯಬೇಕು ಅಂತಾ ಹೇಳಿದ್ರು. ಹೀಗಾಗಿ ಪರೀಕ್ಷೆ ದೃಷ್ಟಿಯಿಂದ ಸಹೋದರನ ಕೈಯಲ್ಲಿ ತಾಳಿ ಕೊಟ್ಟು ಹೋದ್ವಿ, ಪರೀಕ್ಷೆ ಬರೆದ ಬಳಿಕ ಮತ್ತೆ ಬಂದು ತಾಳಿ ಧರಿಸಿದಿವಿ, ಈ ವಿಷ್ಯ ನಮ್ಮ ಮನಸ್ಸಿಗೆ ಆಘಾತ ತಂದಿದೆ ಸರ್ಕಾರ ಹೀಗೆ ಮಾಡಬಾರದಿತ್ತು ಎಂದು ಮಾಧ್ಯಮಗಳಿಗೆ ಪರೀಕ್ಷಾ ಅಭ್ಯರ್ಥಿ ರಾಜಮ್ಮ ನೋವಿನ ಮಾತುಗಳಾನ್ನಾಡಿದ್ದಾರೆ.